ಲೋಕಾಯುಕ್ತ ತಾಂತ್ರಿಕ ವಿಭಾಗ ಅಧಿಕಾರಿಯಿಂದ ತನಿಖೆ

PTR_23 SEP_4
Published on

ಪುತ್ತೂರು: ಈಶ್ವರಮಂಗಲ ಪಾಳ್ಯತ್ತಡ್ಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಬಳಕೆಯಲ್ಲಿದ್ದ ಕೊಳವೆ ಬಾವಿ ದುರಸ್ತಿಗಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ವಿಚಾರದಲ್ಲಿ ಲೋಕಾಯುಕ್ತ ತಾಂತ್ರಿಕ ವಿಭಾಗದ ತನಿಖಾಧಿಕಾರಿ ಯಮುನಾ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ತೀವ್ರ ವಿಚಾರಣೆ ನಡೆಯಿತು.

ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಲೋಕಾಯುಕ್ತ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡದೆ ತಬ್ಬಿಬ್ಬಾಗಿದ್ದಾರೆ. ಇಲಾಖೆಯ ದಾಖಲೆಗಳಲ್ಲೇ ದರ ವ್ಯತ್ಯಾಸವಾಗಿರುವುದು ಕಂಡು ಬಂದಿದ್ದು, ತಪ್ಪಿ ಹೋಗಿದೆ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ. ಕಾಮಗಾರಿ ನಡೆಸಿದ ಕೆ.ಆರ್.ಡಿ.ಎಲ್. ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ. ಬೆಳಗ್ಗೆ ೧೧ರಿಂದ ಸಂಜೆ ೪ರ ತನಕ ಕಚೇರಿಯಲ್ಲಿ ದೂರುದಾರರ ಸಮುಖದಲ್ಲಿ ವಿಚಾರಣೆ ನಡೆದಿದೆ.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಹೇಮಲತಾ, ಯೋಜನಾ ಸಮನ್ವಯ ಅಽಕಾರಿ ಬಸವರಾಜ್, ಪುತ್ತೂರು ಸಹಾಯಕ ನಿರ್ದೇಶಕಿ ಸುನಿತಾ, ದೂರುದಾರರಾದ ಶ್ರೀಧರ ಪೂಜಾರಿ, ಕೊರಗಪ್ಪ ಹಾಜರಿದ್ದರು. ಕೊಳವೆ ಭಾವಿಯ ಪರಿಶೀಲನೆ, ಕೆಸಿಂಗ್ ಪೈಪ್, ಪಂಪ್ ಹಾಗೂ ಆಳದ ತಪಾಸಣೆ ಬುಧವಾರ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net