ವಿಟ್ಲ: ಕೃಷಿ ಜಮೀನಿಗೆ ಗಿರಿಜನ ಉಪಯೋಜನೆಯಡಿ ಬೋರ್‌ವೆಲ್ ಹಾಕಲು ಲಂಚದ ಹಣ ಸ್ವೀಕರಿಸುತ್ತಿರುವ ಸಂದರ್ಭ ಲೋಕಾಯುಕ್ತ ಬಲೆಗೆ ಬಿದ್ದ ಪಂಚಾಯಿತಿ ಅಧ್ಯಕ್ಷೆ ಹಾಗೂ ನೌಕರನಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಜಮೀನು ಮಂಜೂರು ಮಾಡಿದೆ. ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೆಫೀಸಾ ಯಾನೆ ನೆಫಿಸ್ಸಾ ಕೊಳವೆ ಬಾವಿಗೆ ಹಣದ ಬೇಡಿಕೆ ಇಟ್ಟಿದ್ದು, ಬಿಲ್ ಕಲೆಕ್ಟರ್ ವಿಲಿಯಂ ಹಣ ಸ್ವೀಕರಿಸುವ ಸಂದರ್ಭ ಲೋಕಾಯುಕ್ತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿತ್ತು.