

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಲೋಕ ಅದಾಲತ ಕಾರ್ಯಕ್ರಮದಲ್ಲಿ 21,668 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು ಎಂದು ಜಿಲ್ಲಾ ನ್ಯಾಯಾಧೀಶರಾದ ಬಸವರಾಜ ತಿಳಿಸಿದರು.
ಈ ಕುರಿತು ಪ್ರಕಟಣೆ ನಿಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು 14 ಬೆಂಚ್ಗಳನ್ನು ರಚಿಸಿ ರಾಜೀ ಸಂಧಾನಕ್ಕೆ ಪ್ರಕರಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಒಟ್ಟು 21,668 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅದರಲ್ಲಿ 1,770 ನ್ಯಾಯಾಲಯದಲ್ಲಿರುವ ಚಾಲ್ತಿ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಗಿದೆ ಹಾಗೂ 19,898 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಗಿದೆ. ಇತ್ಯರ್ಥಗೊಂಡ ಪ್ರಕರಣಗಳಲ್ಲಿ ಪಾಲುವಾಟ್ನಿ ವಿಭಾಗದ 103 ಪ್ರಕರಣಗಳು, 20 ಮೋಟಾರು ವಾಹನ ಅಪಘಾತ ಪ್ರಕರಣಗಳು, 65 ಚೆಕ್ಬೌನ್ಸ್ ಪ್ರಕರಣಗಳು, 56 ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು, 106 ಇತರೆ ಸಿವಿಲ್ ಪ್ರಕರಣಗಳು, 64 ಬ್ಯಾಂಕ್ ಹಾಗೂ ಹಣ ವಸೂಲಾತಿ ಪ್ರಕರಣಗಳು, 60 ಎಲ್ಎಸಿ ಎಕ್ಸಿಕ್ಯೂಷನ್ ಪ್ರಕರಣಗಳು, 38 ವೈವಾಹಿಕ ಪ್ರಕರಣಗಳು, 33 ವಿದ್ಯುತ್ ಕಾಯ್ದೆ ಪ್ರಕರಣಗಳು ಸೇರಿದಂತೆ ಒಟ್ಟು 1,770 ಚಾಲ್ತಿ ಪ್ರಕರಣಗಳನ್ನು ಇತ್ಯರ್ತಪಡಿಸಿ 11.70 ಕೋಟಿ ರೂ ಪರಿಹಾರ ಒದಗಿಸಲಾಗಿದೆ ಹಾಗೂ 8 ಜೋಡಿ ದಂಪತಿಗಳ ಪುನಮಿರ್ಲನಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.