

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಘಟಾನುಘಟಿ ಅಭ್ಯರ್ಥಿಗಳ ನಡುವೆ ಕೆ.ಆರ್.ಪೇಟೆ ತಾಲೂಕು ಶೀಳನೆರೆ ಹೋಬಳಿ ಊಚನಹಳ್ಳಿ ಗ್ರಾಮದ ಚಂದನ್‌ಗೌಡ ಮತದಾರರ ಗಮನಸೆಳೆದಿದ್ದಾರೆ. ಅಂತೆಯೇ 12,394 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.
ಯೂಟ್ಯೂಬರ್ ಆಗಿರುವ ಚಂದನ್‌ಗೌಡ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ತನ್ನ ಸ್ನೇಹಿತರೊಟ್ಟಿಗೆ ಪ್ರಚಾರ ಮಾಡಿ ಗಮನಸೆಳೆದಿದ್ದರು. ಆ ಚುನಾವಣೆಯಲ್ಲಿ 8,497 ಮತಗಳನ್ನು ಪಡೆದಿದ್ದರು. ಇನ್ನು ಕ್ಷೇತ್ರದಲ್ಲಿ ನಾಲ್ಕನೇ ಸ್ಥಾನವನ್ನು ನೋಟಾ ಪಡೆದುಕೊಂಡಿದೆ. 7,736 ಮತಗಳು ನೋಟಾಗೆ ಹಾಕಿದ್ದು, ಇದರಲ್ಲಿ 30 ಅಂಚೆ ಮತದಾನವೂ ಸೇರಿಕೊಂಡಿವೆ. ಕ್ಷೇತ್ರದಲ್ಲಿ 17,79,243 ಮತಗಳಿದ್ದು, ಈ ಪೈಕಿ 14,52,531 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ 296 ಮತ ತಿರಸ್ಕೃತಗೊಂಡಿವೆ.
ಯೂಟ್ಯೂಬರ್ ಚಂದನ್ ಗೌಡ
ಎಚ್.ಡಿ.ರೇವಣ್ಣ ಗಳಿಸಿದ್ದ 590 ಮತ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗಮನಸೆಳೆದಿದ್ದ ಅಭ್ಯರ್ಥಿ ಎಚ್.ಡಿ.ರೇವಣ್ಣ ಹೆಸರಿನ ವ್ಯಕ್ತಿ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಕೋಡಿಹಳ್ಳಿ ಗ್ರಾಮದ ನಿವಾಸಿ ರೇವಣ್ಣ ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯಿಂದ ನಾಮಪತ್ರ ಸಲ್ಲಿಸಿದಾಗ ಎಲ್ಲರ ಹುಬ್ಬೇರುವಂತೆ ಮಾಡಿತು. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಹೆಸರಿದ್ದ ಕಾರಣ ಕುತೂಹಲ ಮೂಡಿಸಿತ್ತು. ಪಕ್ಷೇತರ ಅಭ್ಯರ್ಥಿ ಎಚ್.ಡಿ.ರೇವಣ್ಣ 590 ಮತಗಳನ್ನು ಪಡೆದಿದ್ದಾರೆ.
ಎಚ್.ಡಿ.ರೇವಣ್ಣ