ದಾಖಲೆ ಇಲ್ಲದೆ 2000 ಸೀರೆಗಳ ಸಾಗಾಟ: ಶ್ರೀರಂಗಪಟ್ಟಣ ಗಡಿಯಲ್ಲಿ ವಶಕ್ಕೆ ಪಡೆದ ಅಧಿಕಾರಿಗಳು

Lok Sabha election Undocumented saree seized Mandya‌
Published on

ಶ್ರೀರಂಗಪಟ್ಟಣ: ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 2000 ಸೀರೆ, ವಾಹನ ಸೇರಿದಂತೆ ಚಾಲಕನನ್ನು ಪಟ್ಟಣ ಪೋಲೀಸರು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಮೈಸೂರಿನಿಂದ ಬೆಂಗಳೂರು ಕಡೆ ಸಾಗುತ್ತಿದ್ದ ಟೆಂಪೋ ಅನ್ನು ತಾಲೂಕು ಗಡಿ ನಗುವನಹಳ್ಳಿ - ಕಳಸ್ತವಾಡಿ ಮದ್ಯೆ ಇರುವ ಚೆಕ್ ಪೋಸ್ಟ್ ಬಳಿ ಪರಿಶೀಲಿಸಲಾಗಿ ಪ್ರಕರಣ ಬೆಳಕಿಗೆ ಬಂದಿದೆ. ಸಿಪಿಐ ಬಿ.ಜಿ.ಕುಮಾರ್ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದ್ದು, ಸೀರೆಗಳಿಗೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ಸೀರೆ, ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net