ಜು.12ಕ್ಕೆ ಲೋಕ ಅದಾಲತ್​

29 06 2025_BGR RURAL_PAGE_7A
ಹೊಸಕೋಟೆ ನ್ಯಾಯಾಲಯದಲ್ಲಿನ ವಕೀಲ ಸಂದಲ್ಲಿ ಹಮ್ಮಿಕೊಂಡಿದ್ದ ಲೋಕ ಅದಾಲತ್​ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲ್​ ಭೀಮಸೇನ ಬಗಾಡಿ ಮಾತನಾಡಿದರು. ಹೆಚ್ಚುವರಿ ಸಿವಿಲ್​ ನ್ಯಾಯಾಧೀಶರಾದ ಸತೀಶ್​ ಬಿ., ಶಿಲ್ಪಾಶ್ರೀ, ವಕೀಲಸ ಸಂದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಜಂಟಿ ಕಾರ್ಯದರ್ಶಿ ಎಂ.ಆನಂದ್​, ಖಜಾಂಚಿ ರುಕ್ಮಿಣಿ ಇದ್ದರು.
Published on

ಹೊಸಕೋಟೆ : ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳು ಕೌಟುಂಬಿಕ ಹಾಗೂ ಭೂಮಿ ವ್ಯಾಜ್ಯಗಳೇ ಆಗಿರುತ್ತವೆ. ಪ್ರಕರಣಗಳ ಇತ್ಯರ್ಥಕ್ಕಾಗಿ ವರ್ಷಾನುಗಟ್ಟಲೇ ಕದಾರರು ನ್ಯಾಯಾಲಯಕ್ಕೆ ಬರಬೇಕಾಗುತ್ತದೆ. ಇದನ್ನು ತಪ್ಪಿಸಲು ರಾಜಿ ಸಂದಾನದ ಮೂಲಕ ಪ್ರಕರಣ ಇತ್ಯರ್ಥ ಮಾಡಬಹುದಾಗಿದ್ದು, ಅದಕ್ಕಾಗಿ ಎರಡನೇ ಲೋಕ ಅದಾಲತ್​ಅನ್ನು ಜುಲೈ 12ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲ ಭೀಮಸೇನ ಬಗಾಡಿ ತಿಳಿಸಿದರು. ನಗರದ ನ್ಯಾಯಾಲಯದ ವಕೀಲರ ಸಂದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜು.12ರಂದು ಲೋಕ ಅದಾಲತ್​ ಹಮ್ಮಿಕೊಳ್ಳಲಾಗಿದ್ದು, ನಾಗರಿಕರು ಸದ್ಬಳಸಿಕೊಳ್ಳಬೇಕು ಎಂದರು. ಹಿರಿಯ ಸಿವಿಲ್​ ನ್ಯಾಯಾಧೀಶ ಅರುಣ್​ ಕುಮಾರ್​ ಮಾತನಾಡಿದರು.

ಮೊದಲ ಲೋಕ ಅದಾಲತ್​ನಲ್ಲಿ ಹೊಸಕೋಟೆಯಿಂದ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಎರಡನೇ ಲೋಕ ಅದಾಲತ್​ಗೆ ವಕೀಲರ ಸಂದ ಸಂಪೂರ್ಣ ಬೆಂಬಲದೊಂದಿಗೆ ಇನ್ನು ಹೆಚ್ಚಿನ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮವಹಿಸಲಾಗುವುದು. | ಕೆ.ರಮೇಶ್​ ಅಧ್ಯಕ್ಷ, ಹೊಸಕೋಟೆ ತಾಲೂಕು ವಕೀಲರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net