ಜಿಲ್ಲೆಯಲ್ಲಿ 10934 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥ: ಜಿಲ್ಲಾ ನ್ಯಾ. ಬಸವರಾಜ

11GDG12
Published on

ಗದಗ: ರಾಜ್ಯಾದ್ಯಂತ ರಾಷ್ಟ್ರೀಯ ಲೋಕಅದಾಲತ್ ಹಮ್ಮಿಕೊಂಡಿದ್ದು,  ಜಿಲ್ಲೆಯಲ್ಲಿ  ಶನಿವಾರದಂದು  ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 14 ಬೆಂಚ್‍ಗಳನ್ನು ರಚಿಸಿ ರಾಜೀ ಸಂಧಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದರಲ್ಲಿ 3,718 ಚಾಲ್ತಿ ಪ್ರಕರಣಗಳನ್ನು ಹಾಗೂ 7,216 ವ್ಯಾಜ್ಯ ಪೂರ್ವ ಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಟ್ಟು 10,934 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.    ಇತ್ಯರ್ಥಗೊಂಡ ಪ್ರಕರಣಗಳಲ್ಲಿ 10 ಮೋಟಾರು ವಾಹನ ಅಪಘಾತ ಪ್ರಕರಣಗಳು,144ಚೆಕ್‍ಬೌನ್ಸ್ ಪ್ರಕರಣಗಳು,45 ಕ್ರಿಮಿನಲ್‍ಕಂಪೌಂಡೆಬಲ್ ಪ್ರಕರಣಗಳು, 306ಅಸಲುದಾವೆ ಪ್ರಕರಣಗಳು,93 ಬ್ಯಾಂಕ್ ಹಾಗೂ ಹಣ ವಸೂಲಾತಿ ಪ್ರಕರಣಗಳು, 28 ವೈವಾಹಿಕ ಪ್ರಕರಣಗಳು, 50 ವಿದ್ಯುಚ್ಚಕ್ತಿ ಪ್ರಕರಣಗಳು ಸೇರಿದಂತೆಒಟ್ಟು3,718 ಚಾಲ್ತಿ ಪ್ರಕರಣಗಳನ್ನು ಒಟ್ಟುರೂ.30,54,06,417/- ಗಳ ಪರಿಹಾರ ಒದಗಿಸುವುದರ ಮೂಲಕ ರಾಜೀ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಅದೇ ರೀತಿ ವ್ಯಾಜ್ಯಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿದ ಬ್ಯಾಂಕ್ ಪ್ರಕರಣಗಳು, ಬಿಎಸ್‍ಎನ್‍ಎಲ್,ಕಂದಾಯಅದಾಲತ್ ಪ್ರಕರಣಗಳು ಸೇರಿದಂತೆಒಟ್ಟು 7,216 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರೂ. 2,08,58,722/- ಗಳಿಗೆ ರಾಜೀ ಸಂಧಾನ ಮಾಡಲಾಗಿದೆ. ಗದುಗಿನ ಪ್ರಧಾನ ಕೌಟುಂಬಿಕ ನ್ಯಾಯಾಲಯದಲ್ಲಿ ಹಾಗೂ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ 5 ಪ್ರಕರಣಗಳಲ್ಲಿ ದಂಪತಿಗಳನ್ನು ಪುನಃಒಂದು ಗೂಡಿಸಲಾಯಿತು. ರೋಣ ನ್ಯಾಯಾಲಯದಲಿ ್ಲ4 ಜೋಡಿ,ನರಗುಂದ ನ್ಯಾಯಾಲಯದಲ್ಲಿ 3 ಜೋಡಿ ಲಕ್ಷ್ಮೇಶ್ವರ ನ್ಯಾಯಾಲಯದಲಿ ್ಲ1 ಜೋಡಿ, ಮುಂಡರಗಿ ನ್ಯಾಯಾಲಯದಲ್ಲಿ 1 ಜೋಡಿ ದಂಪತಿಗಳನ್ನು ಪುನಃ ಒಂದುಗೂಡಿಸಿ ಕಳುಹಿಸಿಕೊಡಲಾಯಿತು.ಒಟ್ಟು 14 ಜೋಡಿ ದಂಪತಿಗಳು ಈ ರಾಷ್ಟ್ರೀಯ ಲೋಕಅದಾಲತದಲ್ಲಿ ಪುನಃ ಒಂದು ಗೂಡಿದ್ದು  ವಿಶೇಷವಾಗಿದೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ,   ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರಎಸ್ ಶೆಟ್ಟಿ, 1ನೇ ಹೆಚ್ಚುವರಿಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಖಾದರಸಾಬ ಎಚ್ ಬೆನಕಟ್ಟಿ, ಅಪರ ಹಿರಿಯ ದಿವಾಣಿ ನ್ಯಾಯಾಧೀಶರಾದ ಪ್ರಕಾಶ ಸಿ ಕುರುಬೆಟ್, ಪ್ರಧಾನ ದಿವಾಣಿ ನ್ಯಾಯಾಧೀಶರಾದಅರುಣ ಚೌಗಲೆ,ಜೆಎಂಎಫ್‍ಸಿ 1 ನೇ ನ್ಯಾಯಾಲಯದ ನ್ಯಾಯಾಧೀಶರಾದ ಪುಷ್ಪಾಜೋಗೋಜಿ,ಜೆಎಂಎಫ್‍ಸಿ 2 ನೇ ನ್ಯಾಯಾಲಯದ ನ್ಯಾಯಾಧೀಶರಾದ ಬೀರಪ್ಪ ಕಾಂಬಳೆ, ಜಿಲ್ಲಾ ವಕೀಲರ ಸಂಘದಅಧ್ಯಕ್ಷರಾದ ಎಂ.ಐ. ಹಿರೇಮನಿಪಾಟೀಲ, ಉಪಾದs್ಯಕ್ಷರಾದ ಎ.ಎಂ. ಹದ್ಲಿ, ಪ್ರಧಾನ ಕಾರ್ಯದರ್ಶಿ ಬಿ.ಎಚ್. ಮಾಡಲಗೇರಿ, ಜಂಟಿ ಕಾರ್ಯದರ್ಶಿ ಪಿ.ಬಿ. ಕಣಗಿನಹಾಳ, ಖಜಾಂಚಿ ವಿ.ಎಚ್. ಮೇರವಾಡೆ,  ಸರ್ಕಾರಿಅಭಿಯೋಜಕರಾದ ಸವಿತಾ ಎಂ.ಶಿಗ್ಲಿ, ಜಿಲ್ಲಾ ಸರ್ಕಾರಿ ವಕೀಲರಾದ ಎಂ.ಎಂ. ಕುಕನೂರ, ಅಪರಜಿಲ್ಲಾ ಸರ್ಕಾರಿ ವಕೀಲರಾದ  ಕೆ.ಎಸ್.ಹೂಲಿ, ಹಾಗೂ ವಕೀಲ ವೃಂದದವರು, ಸಂಧಾನಕಾರ ವಕೀಲರು, ಪಕ್ಷಗಾರರು ಹಾಗೂ ಎಲ್ಲಾ ನ್ಯಾಯಾಲಯಗಳ ಸಿಬ್ಬಂದಿವರ್ಗ ಉಪಸ್ಥಿತರಿದ್ದು ಲೋಕ ಅದಾಲತ್ ಯಶಸ್ವಿಗೊಳಿಸಿದರು.

ಆಯಾ ತಾಲೂಕಾ ನ್ಯಾಯಾಲಯಗಳಲ್ಲಿಯೂ ಕೂಡ  ತಾಲೂಕುಗಳ ನ್ಯಾಯಾಧೀಶರು ಹಾಗೂ ವಕೀಲ ವೃಂದದವರು, ಸಿಬ್ಬಂದಿ ವರ್ಗ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು   ಲೋಕ ಅದಾಲತ್‍ದಲ್ಲಿ ಪಾಲ್ಗೊಂಡು ರಾಜೀ ಸಂಧಾನ ಯಶಸ್ವಿಗೊಳಿಸಿದರು.

ರಾಷ್ಟ್ರೀಯ ಲೋಕ ಅದಾಲತ್‍ಗೆ ಸಹಕಾರ ನೀಡಿದ ವಕೀಲ ವೃಂದದವರಿಗೆ, ಪಕ್ಷಗಾರರಿಗೆ, ಜಿಲ್ಲೆಯ ನ್ಯಾಯಾಧೀಶರಿಗೆ, ಸಿಬ್ಬಂದಿ ವರ್ಗದವರಿಗೆ, ಜಿಲ್ಲಾಡಳಿತ, ಪೆÇಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ, ಮಾಧ್ಯಮದವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅದs್ಯಕ್ಷರಾದ ಬಸವರಾಜ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಗುರುಪ್ರಸಾದ ಧನ್ಯವಾದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net