ಸಂಗೀತ ಮಹಾವಿದ್ಯಾಲಯದಲ್ಲಿ ಲೂಯಿ ಬ್ರೈಲ್ ಜಯಂತಿ

04GDG04
Published on

ಗದಗ: ಪ್ರತಿ ತಿಂಗಳು ಮಹಾವಿದ್ಯಾಲಯದಲ್ಲಿ ಮಾಸಿಕ ಸಂಗೀತ ಸುದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೆ ಪೂರಕ ವಾಗಿದೆ ಎಂದು ಡಾ. ಎಸ್ ಎಸ್ ಗಡ್ಡದಮಠ ಅವರು ಹೇಳಿದರು .

ಡಾ.ಪಿ ಜಿ ಎ ಎಸ್ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯ ಹಾಗೂ ಸಂಗೀತ ಸ್ನಾತಕೋತರ ಕೇಂದ್ರದಿಂದ ಆಯೋಜಿಸಲಾದ ಲೂಯಿ ಬ್ರೈಲ್ ಜಯಂತಿ ಹಾಗೂ ಮಾಸಿಕ ಸಂಗೀತ ಸುದಿನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಾ ಪ್ರತಿ ತಿಂಗಳ ವಿದ್ಯಾರ್ಥಿಗಳು ಖಯಾಲ, ಠುಮ್ರಿ, ಸಿತಾರ್, ವೈಲಿನ್ ಹಾಗೂ ತಬಲಾ ವಿಭಾಗದಿಂದ ವಿದ್ಯಾರ್ಥಿಗಳು ತಮ್ಮ ಸಂಗೀತ ಕಲೆಯನ್ನು ತೋರಿಸಲು ಈ ವೇದಿಕೆಯನ್ನು ಬಳಸಿಕೊಂಡು ಅತ್ಯುತ್ತಮ ಕಲಾವಿದರಾಗಿ ಹೊರಹೊಮ್ಮ ಬೇಕೆಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಂದ ವಿದ್ಯಾರ್ಥಿ ಎಚ್ ಮಹೇಶ್ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ಲೂಯಿಬ್ರೈಲೂರು ಆರು ಚುಕ್ಕೆ ಗುಳ್ಳೆ ಬ್ರೈಲ್ ಲಿಪಿಯನ್ನು ಕಂಡುಹಿಡಿದು ಅಂದ ವಿದ್ಯಾರ್ಥಿಗಳಿಗೆ ಅಕ್ಷರ ಮೂಲಕ ಜ್ಞಾನವನ್ನು ಸಂಪಾದಿಸಲು ಅನು ಮಾಡಿಕೊಟ್ಟಂತ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಚಾರ್ಯ ಡಾ ಮೃತ್ಯುಂಜಯ ಶೆಟ್ಟರ್ ಅವರು ಮಾತನಾಡಿ ಯಾರಿಗೆ ಛಲ ಇರುತ್ತದೆ ಅವರು ಸಾಧಕರಾಗುತ್ತಾರೆ ಲೂಯಿ ಬ್ರೈಲ್ರರು ಅಂದತ್ವವನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದಕ್ಕಾಗಿ ಇಡೀ ವಿಶ್ವವೇ ಅವರನ್ನು ಇಂದು ಸ್ಮರಿಸುತ್ತದೆ ಎಂದು ಅವರು ಹೇಳಿದರು.

ಕನ್ನಡ ಉಪನ್ಯಾಸಕ ವಿ ಎಂ ಗುರುಮಠ , ಶ್ರೀಮತಿ ಮಹಾಲಕ್ಷ್ಮಿ ಹೆಗಡೆ ಡಾ ಸುಮಿತ್ರ ಹಿರೇಮಠ,ಡಾ ಲತಾ ವೃತ್ತಿಕೊಪ್ಪ, ತಬ್ಲಾ ವಾದಕ ಶರಣಪ್ಪ ಕಲ್ಬುರ್ಗಿ,ಡಾ ಎನ್ ವಿ ಅಕ್ಕಸಾಲಿ, ಡಾ ಕೊಡಗಾನೂರು ಹನುಮಂತ್, ಡಾ, ವಿಶ್ವನಾಥ್ ಹಿರೇಮಠ, ವಾಯ್ . ಆರ. ಮೂಲಿಮನಿ ಹಾಗೂ ಕುಮಾರಿ ಯಶೋಧ ಮಾದರ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ವಿದ್ಯಾರ್ಥಿ ರಾಥೋಡ್ ಪ್ರಾರ್ಥನೆ ಗೈದರು ಇವರಿಗೆ ನೂರೊಂದುಯ ಹಾರ್ಮೋನಿಯಂ ಸಾಥ್ ನೀಡಿದರು ಕಾರ್ಯಕ್ರಮವನ್ನು ಕುಮಾರ್ ಅಮೋಘ ನಡೆಸಿದರು .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net