ಕ್ರೀಡಾಕೂಟದ ಲಾಂಛನ, ಜರ್ಸಿ ಬಿಡುಗಡೆ

Oplus_131072
ಚಿಟ್ಟಡೆ ಕೊಡವ ಮುಸ್ಲಿಂ ಚೆನೋತಂಡ ಫ್ಯಾಮಿಲಿ ಜರ್ಸಿ ಮತ್ತು ಲಾಂಛನವನ್ನು ಗಣ್ಯರು ಬಿಡುಗಡೆ ಗೊಳಿಸಿದರು. ಶಾದುಲಿ, ಮಾಳೆಟಿರ ಬಾಲ, ಸಿ.ಯು.ಮುನೀರ್, ಸಿ.ಯು.ರಝಕ್, ಸಿ.ಯು.ಸಂಸುದ್ದೀನ್, ಸಿ.ಯು.ಶಾಫಿ, ಸಿ.ಯು. ಜಸ್ಸಿರ್, ಸಿ.ಯು. ಇಸಾಕ್ ಇದ್ದರು.
Published on

ವಿರಾಜಪೇಟೆ: ಇಲ್ಲಿನ ಚಿಟ್ಟಡೆ ಕೊಡವ ಮುಸ್ಲಿಂ ಚೆನೋತಂಡ ಫ್ಯಾಮಿಲಿ ಜರ್ಸಿ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮವನ್ನು ಚಿಟ್ಟಡೆಯಲ್ಲಿ ಭಾನುವಾರ ಹಮ್ಮಿಕೊಂಡಿತ್ತು.

ಸಬ್ ಇನ್ಸ್‌ಪೆಕ್ಟರ್ ಸಿ.ಯು.ಶಾದುಲಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷಿಕ ಮಾಳೆಟ್ಟಿರ ಬಾಲ ಅವರು ಚೆನೋತಂಡ ಫ್ಯಾಮಿಲಿ ಲಾಂಛನ ಮತ್ತು ಜೆರ್ಸಿ ಬೀಡುಗಡೆಗೊಳಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಚೆನೋತಂಡ ಸಂಸಾರ ಹಿರಿಯರಿಗೆ ಸನ್ಮಾನ ಮತ್ತು ನೆನಪಿನ ಕಾಣಿಕೆ ನೀಡಲಾಯಿತು. ಚೆನೋತಂಡ ಸಂಸಾರ ಮತ್ತು ಆಯೋಜಕರಾದ ಸಿ.ಯು.ಮುನೀರ್, ಸಿ.ಯು.ರಝಕ್, ಸಿ.ಯು.ಸಂಸುದ್ದೀನ್, ಸಿ.ಯು.ಶಾಫಿ, ಸಿ.ಯು.ಜಸ್ಸಿರ್, ಸಿ.ಯು. ಇಸಾಕ್, ಸಿ.ಯು.ಇರ್ಫಾನ್, ಚಿಟ್ಟಡೆ ಜಮಾಯತ್ ಅಧ್ಯಕ್ಷ ಪಕ್ರುದ್ದೀನ್, ಕಾರ್ಯದರ್ಶಿ ಅಸನ್, ಕಾಫಿ ಬೆಳೆಗಾರರಾದ ಅಂತೋಣಿ ಲೋಬೊ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಇ.ಮುಸ್ತಫ, ಕುವ್ವಲೆರ ಉಮ್ಮರ್, ಶಾದುಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net