ಓಂ ಪ್ರಕಾಶ್‌ಗೆ ಲಾಗೈಡ್ ಬಳಗ ಶ್ರದ್ಧಾಂಜಲಿ

11
Published on

ಮೈಸೂರು: ಬೆಂಗಳೂರಿನಲ್ಲಿ ಹತ್ಯೆಯಾದ ನಿವೃತ್ತ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಅವರಿಗೆ ಲಾಗೈಡ್ ಬಳಗದಿಂದ ನಗರದಲ್ಲಿ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಹಿರಿಯ ವಕೀಲರಾದ ‘ಲಾಗೈಡ್’ ಎಚ್.ಎನ್. ವೆಂಕಟೇಶ್ ಅವರು, ಓಂಪ್ರಕಾಶ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನೊಂದವರಿಗೆ ಮಾಡಿದ ಸಹಕಾರ, ಅವರೊಂದಿನ ಒಡನಾಟವನ್ನು ಸ್ಮರಿಸಿದರು.

ನಿವೃತ್ತ ಎಸ್‌ಪಿ ರಾಜೇಂದ್ರ ಪ್ರಸಾದ್, ನಿವೃತ್ತ ಎಸಿಪಿ ಆರ್.ಗಿರಿಜೇಶ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್ ಅವರು ಓಂಪ್ರಕಾಶ್ ಅವರ ವ್ಯಕ್ತಿತ್ವ, ದಕ್ಷತೆ ಬಗ್ಗೆ ಮಾತನಾಡಿದರು.

ವಕೀಲರ ಸಂಘದ ಮಾಜಿ ಅಧ್ಯಕ್ಷ ಜಿ.ವಿ.ರಾಮಮೂರ್ತಿ, ಉದ್ಯಮಿ ಅಭಿಷೇಕ್ ಹೆಗ್ಡೆ, ಇನ್‌ಸ್ಪೆಕ್ಟರ್ ಪುರುಷೋತ್ತಮ್, ಮುಖಂಡರಾದ ಶಂಭು, ಹೇಮಂತ್, ತಬ್ರೇಜ್, ವಕೀಲರಾದ ಜೈ ಕುಮಾರ್ ರಾಜೇಶ್, ಸ್ವಾಮಿ, ನಾಗರಾಜು, ಪ್ರಶಾಂತ್, ಗಿರೀಶ್ ಇತರರು ಇದ್ದರು. ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರನೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net