ಲಾಕ್‌ಡೌನ್ ವೇಳೆ ಅನಧಿಕೃತ ಪಾಸ್ ವಿತರಣೆ, ಟಿಬಿ ಡ್ಯಾಂ ಠಾಣೆ ಎಸ್‌ಐ ಅಮಾನತು

070520 Hosapete Lockdown Permission Letter
Published on

ಹೊಸಪೇಟೆ: ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಗೆ ಪಾಸ್‌ಗಳನ್ನು ವಿತರಿಸಿದ ಆರೋಪದ ಮೇಲೆ ಟಿಬಿ ಡ್ಯಾಂ ಪೊಲೀಸ್ ಠಾಣೆ ಎಸ್‌ಐ ನಾಗಪ್ಪರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕರೊನಾ ನಿಯಂತ್ರಣಕ್ಕೆ ಜನ ಸಂಚಾರಕ್ಕೂ ನಿರ್ಬಂಧ ಹೇರಲಾಗಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಂಚರಿಸಲು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಹೊರತುಪಡಿಸಿ ಬೇರೆಯರಿಗೆ ಪಾಸ್ ನೀಡುವ ಅಧಿಕಾರವಿಲ್ಲ. ಸಂಘಟನೆಗಳ ಲೆಟರ್‌ಹೆಡ್‌ನಲ್ಲೇ ಪೊಲೀಸ್ ಇಲಾಖೆಯ ಮುದ್ರೆ ಒತ್ತಿ, ಬುಲೆರೋ ಮತ್ತು ದ್ವಿಚಕ್ರವಾಹನಕ್ಕೆ ಚೆಕ್‌ಪೋಸ್ಟ್‌ಗಳಲ್ಲಿ ಸಹಕರಿಸಲು ಸೂಚಿಸಿ ಪಾಸ್ ವಿತರಿಸಿದ್ದರು. ಹೀಗಾಗಿ ಮಂಗಳವಾರವೇ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಎಸ್‌ಪಿ ಸಿ.ಕೆ.ಬಾಬಾ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net