ಲಾಕ್‌ಡೌನ್ ಆದೇಶ ಪಾಲಿಸಿ

23blh1 ahar vitarane-Web
ಬೈಲಹೊಂಗಲ ತಾಲೂಕಿನ ಕೆಂಗಾನೂರು ಗ್ರಾಮದಲ್ಲಿ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಅವರು ಗುರುವಾರ ಬಡವರಿಗೆ ಆಹಾರ ಪದಾರ್ಥ ವಿತರಿಸಿದರು. ಆನಂದ ಮೂಗಿ, ಅಪ್ಪಾಸಾಹೇಬ ಭೋಸಲೆ, ಕುಮಾರ ಪೂಜೇರಿ ಇತರರು ಇದ್ದರು.
Published on

ಬೈಲಹೊಂಗಲ: ಎಲ್ಲರೂ ಲಾಕ್‌ಡೌನ್ ಆದೇಶ ಪಾಲಿಸಬೇಕು. ಮಹಾಮಾರಿ ಕರೊನಾ ಸೋಂಕು ಇಂದು ವಿಶ್ವವನ್ನೇ ಕಾಡುತ್ತಿದೆ. ಸಾರ್ವಜನಿಕರು ಮನೆಯಲ್ಲೇ ಉಳಿದುಕೊಂಡು ಸಾಂಕ್ರಾಮಿಕ ರೋಗ ತಡೆಗೆ ಸಹಕಾರ ನೀಡಬೇಕು. ದಿನಸಿ ವಸ್ತುಗಳನ್ನು ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮಾಜಿ ಶಾಸಕ ಡಾ.ವಿ.ಐ. ಪಾಟೀಲ ಹೇಳಿದರು.

ಸಮೀಪದ ಕೆಂಗಾನೂರ ಗ್ರಾಮದಲ್ಲಿ ವಾಸಿಸುತ್ತಿದ್ದ ಅಲೆಮಾರಿ ಜನಾಂಗದವರನ್ನು ಗುರುವಾರ ಭೇಟಿ ಮಾಡಿ ಅವರಿಗೆ ಆಹಾರ ಪದಾರ್ಥ ವಿತರಿಸಿದ ಬಳಿಕ ಅವರು ಮಾತನಾಡಿದರು. ಜನರು ಲಾಕ್‌ಡೌನ್ ಆದೇಶವನ್ನು ಸರಿಯಾಗಿ ಪಾಲಿಸಬೇಕು ಎಂದರು. ಬಳಿಕ ಮಾಜಿ ಶಾಸಕರು ತಮ್ಮ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ವಿನಾಯಕ ನಗರ, ಪತ್ರಿಬಸವೇಶ್ವರ ನಗರ, ವಾಲ್ಮೀಕಿ ಕಾಲನಿ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಆಹಾರ ಪದಾರ್ಥ ಹಾಗೂ ಮಾಸ್ಕ್ ವಿತರಿಸಿದರು. ಮಡಿವಾಳಪ್ಪ ಹೋಟಿ, ಆನಂದ ಮೂಗಿ, ಶ್ರೀಶೈಲ ಯಡಳ್ಳಿ, ಸಿ.ಪಿ.ಈಟಿ, ಚಂದ್ರು ಪಟ್ಟೇದ, ಬಸವರಾಜ ನೇಸರಗಿ, ಅಪ್ಪಾಸಾಹೇಬ ಭೋಸಲೆ, ಕುಮಾರ ಪೂಜೇರ, ಸುನೀಲ ಈಟಿ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net