ಸಂತೆ ರದ್ದು, ವ್ಯಾಪಾರಿಗಳ ಪರದಾಟ

web 1
Published on

ಮೂಡಿಗೆರೆ: ಲಾಕ್​ಡೌನ್ ಕಾರಣ 13 ವಾರಗಳಿಂದ ಸಂತೆ ನಡೆಯದಿರುವುದರಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲಾಕ್​ಡೌನ್ ನಿಯಮ ಸಡಿಲವಾದ್ದರಿಂದ ವ್ಯಾಪಾರಿಗಳು ಸಂತೆ ಆರಂಭಿಸಿದ್ದರು. ಕರೊನಾ ಹೆಚ್ಚಾಗುತ್ತಿದ್ದಂತೆ ರಾತ್ರಿ 8ರಿಂದ ಬೆಳಗ್ಗೆ 5 ರವರೆಗೆ ಲಾಕ್​ಡೌನ್ ಬಿಗಿಯಾಗಿದ್ದರಿಂದ ಮತ್ತೆ ಸಂತೆ ರದ್ದುಪಡಿಸಿ ಅಧಿಕಾರಿಗಳು ಸಂತೆ ಮೈದಾನ ರಸ್ತೆಗೆ ಬ್ಯಾರಿಕೇಡ್ ಅಡ್ಡವಿಟ್ಟು ನಾಮಫಲಕ ಅಳವಡಿಸಿದ್ದಾರೆ.

ಕಳೆದ 2 ವಾರ ಸಂತೆ ನಡೆದಿದ್ದರಿಂದ ಈ ವಾರವೂ ಸಂತೆಗೆ ವ್ಯಾಪಾರಿಗಳು ಆಗಮಿಸಿದ್ದರು. ನಾಮಫಲಕ ನೋಡಿ ಬಂದ ದಾರಿಗೆ ಸುಂಕವಿಲ್ಲವೆಂದು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತ ತಾಲೂಕು ಕಚೇರಿ ಹಾಗೂ ಚರ್ಚ್ ಎದುರಿನ ರಸ್ತೆಯಲ್ಲಿ ವಾಹನಗಳನ್ನು ಸಾಲಾಗಿ ನಿಲ್ಲಿಸಿ ಬೀದಿ ಬದಿಯಲ್ಲಿ ವ್ಯಾಪಾರ ನಡೆಸಿದರು. ಜನರೂ ಕೂಡ ಮಾಹಿತಿ ಇಲ್ಲದೆ ಪರಿತಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net