ನಾಳೆಯಿಂದ ಗುರುಪುರ, ಕೈಕಂಬ ಸ್ತಬ್ಧ

covid
Published on

ಗುರುಪುರ: ಗುರುಪುರ-ಕೈಕಂಬ ವ್ಯಾಪ್ತಿಯ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೂನ್ 3ರಿಂದ 7ರವರೆಗೆ ಸ್ವಯಂಪ್ರೇರಿತ ಸಂಪೂರ್ಣ ಲಾಕ್‌ಡೌನ್ ಮಾಡಲು ಇಲ್ಲಿನ ಸಾರ್ವಜನಿಕ ಹಿತರಕ್ಷಣಾ ಸಮಿತಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಗುರುಪುರ-ಕೈಕಂಬ ಪ್ರದೇಶದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯೂ ವೃದ್ಧಿಸುತ್ತಿದೆ. ಈ ನಿಟ್ಟಿನಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಸಂಪೂರ್ಣ ಲಾಕ್‌ಡೌನ್‌ಗೆ ಬೆಂಬಲಿಸಿದರೆ ಮಾತ್ರ ಸೋಂಕಿನ ಮೇಲೆ ಹಿಡಿತ ಸಾಧಿಸಬಹುದು ಎಂದು ಸಮಿತಿ ಸದಸ್ಯ, ಕಂದಾವರ ಗ್ರಾಪಂ ಸದಸ್ಯರಾದ ಸುದರ್ಶನ್ ಮತ್ತು ಸಂಪತ್ ತಿಳಿಸಿದ್ದಾರೆ.

ಸಮಿತಿ ಈಗಾಗಲೇ ಗುರುಪುರ, ಕಂದಾವರ, ಗಂಜಿಮಠ ಮತ್ತು ಪಡುಪೆರಾರ ಗ್ರಾಪಂ ಕಚೇರಿಗಳಿಗೆ ತೆರಳಿ ಸ್ವಯಂಪ್ರೇರಿತ ಸಂಪೂರ್ಣ ಲಾಕ್‌ಡೌನ್ ಬಗ್ಗೆ ಅಧಿಕಾರಿಗಳಿಗೆ ಮನವಿ ನೀಡಿ ಮನವರಿಕೆ ಮಾಡಿದೆ. ಅಧಿಕಾರಿ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಗುರುವಾರದಿಂದ ಮೆಡಿಕಲ್, ಹಾಲು, ದಿನಪತ್ರಿಕೆ ವಿತರಣೆಗೆ ಮಾತ್ರ ಅವಕಾಶವಿದೆ ಎಂದು ಸಮಿತಿ ಹೇಳಿದೆ.

ಬಂದ್‌ಗೆ ಗಣ್ಯರ ಸಹಕಾರ: . ಕೋವಿಡ್ ಸೋಂಕು ಪ್ರಕರಣ ಹತ್ತಿಕ್ಕುವ ದೆಸೆಯಲ್ಲಿ ಸ್ವಯಂಪ್ರೇರಿತ ಸಂಪೂರ್ಣ ಲಾಕ್‌ಡೌನ್ ಅಗತ್ಯ ಎಂದು ಕಂದಾವರ ಚರ್ಚ್ ಧರ್ಮಗುರು ಫಾ.ಆ್ಯಂಟನಿ ಲೋಬೊ, ಗುರುಪುರ ರೇಂಜ್ ಮದ್ರಸ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ನೌಶಾದ್ ತಿಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಕೆಲದಿನವಾದರೂ ಸ್ವಯಂಪ್ರೇರಿತ ಬಂದ್ ಅಗತ್ಯ. ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದು ಸಮಿತಿ ಪದಾಧಿಕಾರಿ, ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಪರ್ಕ ಪ್ರಮುಖ ಹರೀಶ್ ಮಟ್ಟಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net