ಲಾಕ್​ಡೌನ್ ಎಂಜಾಯ್​ಮೆಂಟ್​- ಕಾಡುಹಂದಿ, ಜಿಂಕೆ ಬೇಟೆಯಾಡಿದವರ ಬಂಧನ

Deer 6 APR 20
Published on

ಚಿಕ್ಕಬಳ್ಳಾಪುರ:ಕರೊನಾ ಸೋಂಕು ತಡೆಗಟ್ಟುವ ಸಲುವಾಗಿ ದೇಶಕ್ಕೆ ದೇಶವೇ ಲಾಕ್​ಡೌನ್ ಆಗಿರುವಾಗ, ತೆಪ್ಪಗೆ ಮನೆಯೊಳಗೆ ಇರುವುದು ಬಿಟ್ಟು ಕಾಡಿಗೆ ತೆರಳಿ ಕಾಡುಹಂದಿ, ಜಿಂಕೆಯನ್ನು ಬೇಟೆಯಾಡಿದವರು ಈಗ ಪೊಲೀಸರ ಅತಿಥಿ.

ಜಕ್ಕಲಮಡಗು- ಮೊಟ್ಲೂರು ಅರಣ್ಯ ಪ್ರದೇಶದಲ್ಲಿ ಕಾಡುಹಂದಿ, ಜಿಂಕೆ ಬೇಟೆಯಾಡುತ್ತಿದ್ದ ವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್ (42), ಎನ್.ಸಿ. ದಯಾನಂದ (41), ಬೆಂಗಳೂರಿನ ನಾಗದೇನಹಳ್ಳಿ ಮಧುಸೂಧನ್ (46), ದೇವರಾಜ್ (46) ಮತ್ತು ಮೊಟ್ಲೂರು ವೆಂಕಟೇಶ್ (48) ಬಂಧಿತರು. ಆರೋಪಿಗಳು ಪ್ರಾಣಿಗಳನ್ನು ಕೊಂದು ಸುಟ್ಟಿದ್ದು ಮಾಂಸವನ್ನು ಸಮೀಪದ ಫಾಮ್ರ್ ಹೌಸ್​ನಲ್ಲಿಟ್ಟಿದ್ದರು.

ಬಂಧನ: ಬನ್ನೇರುಘಟ್ಟದಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಮುಂದಾಗಿದ್ದವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಸವನಪುರ ನಿವಾಸಿ ಥಾಮಸ್ (45) ಬಂಧಿತ ಆರೋಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net