ಲಾಕ್‌ಡೌನ್ ಪಾಲನೆಗೆ ಡ್ರೋನ್ ಬಲ

drone
Published on

ಖಾನಾಪುರ: ತಾಲೂಕಿನಲ್ಲಿ ಲಾಕ್‌ಡೌನ್ ಮತ್ತಷ್ಟು ಬಲಪಡಿಸಲು ಪೊಲೀಸ್ ಇಲಾಖೆ ಡ್ರೋನ್ ಕ್ಯಾಮರಾ ಬಳಕೆ ಮಾಡುತ್ತಿದೆ.

ಪಟ್ಟಣದಲ್ಲಿ ಇತ್ತೀಚೆಗೆ ಡ್ರೋನ್ ಕ್ಯಾಮರಾ ಪ್ರಾಯೋಗಿಕ ಬಳಕೆ ಪ್ರಾರಂಭಿಸಿರುವ ಪೊಲೀಸರಿಗೆ ಖಾನಾಪುರ ಹೊರವಲಯದ ಗಾಂಧಿನಗರ ಬಡಾವಣೆಯಲ್ಲಿ ಹತ್ತಾರು ಯುವಕರು ಗುಂಪು ಸೇರಿದ್ದು ಕಂಡಿಬಂದಿತು. ಕೂಡಲೇ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ಗುಂಪನ್ನು ಚದುರಿಸಿದ್ದಾರೆ. ಖಾನಾಪುರ ಠಾಣೆಗೆ ಒಟ್ಟು 4 ಡ್ರೋನ್‌ಗಳು ಮಂಜೂರಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net