ಕಾಲ್ನಡಿಗೆಯಲ್ಲೇ ತಾಯ್ನಡಿಗೆ ಹೊರಟ ಕಾರ್ಮಿಕರು

AMT 5-2
Published on

ಆಲಮಟ್ಟಿ: ಆಲಮಟ್ಟಿ ಜಲಾಶಯ ಕೆಲಸಕ್ಕಿದ್ದ ಅಂತಾರಾಜ್ಯ ಕಾರ್ಮಿಕರು ಲಾಕ್‌ಡೌನ್ ಸಡಿಲಿಕೆಯಾಗಿದ್ದರಿಂದ ತಮ್ಮ ರಾಜ್ಯಗಳತ್ತ ಸೋಮವಾರ ತೆರಳಿದರು.
ಇಲ್ಲಿನ ಜಲಾಶಯದಲ್ಲಿ ಗ್ರೌಂಟಿಂಗ್ ಹಾಗೂ ಗೇಟ್‌ಗಳ ವಿಭಾಗದ ತಾಂತ್ರಿಕ ಕೆಲಸ ನಿರ್ವಹಿಸುತ್ತಿದ್ದ ಫೆರೋ ಕಂಪನಿ ಕಾರ್ಮಿಕರು ಮಹಾರಾಷ್ಟ್ರದ ವಿವಿಧ ಕಡೆಯವರಿದ್ದರು. ಅವರೆಲ್ಲ ಲಾಕ್‌ಡೌನ್‌ಕ್ಕೂ ಮುನ್ನ ಆಲಮಟ್ಟಿಯಲ್ಲೇ ವಾಸವಾಗಿದ್ದರು.
ಈಗ ಲಾಕ್‌ಡೌನ್ ಸಡಲಿಕೆ ಆಗಿದ್ದರಿಂದ ಈ ಕಾರ್ಮಿಕರು ತಮ್ಮ ರಾಜ್ಯಗಳತ್ತ ಹೆಜ್ಜೆ ಹಾಕುತ್ತಿದ್ದು, ಯಾವುದೇ ವಾಹನವಿಲ್ಲದ್ದರಿಂದ ಕಾಲ್ನಡಿಗೆಯಲ್ಲೇ ಸಾಗುತ್ತಿದ್ದಾರೆ. ಮುಂದೆ ಯಾವುದಾದರೂ ವಾಹನ ಸಿಕ್ಕರೆ ಅದರ ಮೂಲಕ ತಮ್ಮ ರಾಜ್ಯ ತಲುಪುದಾಗಿ ಹೇಳಿದರು.
ಪಾದಯಾತ್ರೆ ಮೂಲಕ ಸಾಗಿದ 10 ಜನ ಕಾರ್ಮಿಕರು. ಅವರಿಗೆ ಕೆಬಿಜೆಎನ್‌ಎಲ್ ಆಗಲಿ, ಕೆಲಸ ನಿರ್ವಹಿಸಿದ ಕಂಪನಿಯಾಗಲಿ ಸಾರಿಗೆ ವ್ಯವಸ್ಥೆ ಕಲ್ಪಿಸದಿರುವುದು ವಿಷಾದದ ಸಂಗತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net