ಮಳೆ, ಬಿಸಿಲಿಗೆ ಬೆಂಡಾಗುತ್ತಿವೆ 5284 ವಾಹನ ; ಲಾಕ್‌ಡೌನ್ ನಿಯಮ ಉಲ್ಲಂಸಿದಾಗ ವಶಕ್ಕೆ ; ಬೈಕ್, ಆಟೋ, ಕಾರುಗಳೂ ಅನಾಥ

DSC_3092
Published on

ತುಮಕೂರು: ಕರ್ಯ್ೂ ನಿಯಮ ಉಲ್ಲಂಸಿ ರಸ್ತೆಗಳಿದಿದ್ದ 5284 ವಾಹನಗಳನ್ನು ವಶಕ್ಕೆ ಪಡೆದಿರುವ ಪೊಲೀಸರಿಗೆ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ. ತಿಪಟೂರು, ಶಿರಾ, ಮಧುಗಿರಿ ಹಾಗೂ ಕುಣಿಗಲ್ ಉಪವಿಭಾಗಗಳ ಆಯಾ ಠಾಣಾ ವ್ಯಾಪ್ತಿಯಲ್ಲಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೋರ್ಟ್ ಅನುಮತಿ ಇಲ್ಲದೆ ವಾಹನಗಳನ್ನು ಮಾಲೀಕರಿಗೆ ಕೊಡಲಾರದೆ ಎಲ್ಲೆಂದರಲ್ಲಿ ನಿಲ್ಲಿಸಿದ್ದು ವಾಹನ ಮಾಲೀಕರಿಗೂ ಮಳೆ, ಗಾಳಿ, ಬಿಸಿಲಿಗೆ ವಾಹನ ಹಾಳಾಗುವ ಆತಂಕವಿದೆ.

ಕಳೆದ ಒಂದೂವರೆ ತಿಂಗಳಿನಿಂದಲೂ ವಾಹನಗಳು ಬಿಸಿಲಿನಲ್ಲಿಯೇ ನಿಂತಿದ್ದು ಕೆಲವು ಹಾಳಾಗುವ ಅಪಾಯವಿದೆ, ತುಮಕೂರು ನಗರದಲ್ಲಿಯೇ 2 ಸಾವಿರಕ್ಕೂ ಹೆಚ್ಚು ವಾಹನಗಳು ಪೊಲೀಸರ ವಶದಲ್ಲಿವೆ, ಕರ್ಯ್ೂ ಕೊನೆಯಾಗದೆ ನ್ಯಾಯಾಲಯಕ್ಕೂ ಹಾಜರುಪಡಿಸಲಾಗದೆ ಠಾಣೆಯಲ್ಲಿಯೇ ಎಲ್ಲ ವಾಹನಗಳನ್ನು ನಿಲ್ಲಿಸಿಕೊಳ್ಳುವುದು ಪೊಲೀಸರಿಗೂ ಸವಾಲಾಗಿದೆ. ಪೊಲೀಸ್ ನಿವೇಶನ, ಸಮುದಾಯ ಭವನದ ಆವರಣದಲ್ಲಿ ವಾಹನಗಳನ್ನು ನಿಲ್ಲಿಸಲಾಗಿದೆ.

ಕರೊನಾ ಹಿನ್ನೆಲೆಯಲ್ಲಿ ನ್ಯಾಯಾಲಯ ತುರ್ತು ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುತ್ತಿರುವ ಕಾರಣಕ್ಕೆ ವಾಹನಗಳನ್ನು ಬಿಡಿಸಿಕೊಳ್ಳುವುದು ಮಾಲೀಕರಿಗೆ ಸಾಧ್ಯವಾಗಿಲ್ಲ, ಈ ವಿಷಯದಲ್ಲಿ ಪೊಲೀಸರೂ ಅಸಹಾಯಕರಾಗಿದ್ದು, ನ್ಯಾಯಾಲಯದ ಕಲಾಪಗಳು ಆರಂಭವಾಗುವವರೆಗೂ ಅಥವಾ ನ್ಯಾಯಾಲಯದ ನಿರ್ದೇಶನ ಬರುವವರೆಗೂ ಕಾಯುವುದು ಅನಿವಾರ್ಯ ಎನಿಸಿದೆ.

ಆಟೋಗಳಿಗೂ ನಷ್ಟ: ಕರೊನಾ ಸಂದರ್ಭದಲ್ಲಿ ಪೊಲೀಸರು ನೂರಾರು ಆಟೋಗಳನ್ನು ವಶಪಡಿಸಿಕೊಂಡಿದ್ದು ಮಳೆ, ಬಿಸಿಲಿಗೆ ಹೆಚ್ಚು ಹಾನಿಯಾಗುವ ಅಪಾಯವಿದೆ, ಇದರಿಂದಲೇ ಜೀವನ ನಡೆಸುವ ಆಟೋ ಚಾಲಕರು ಭವಿಷ್ಯದಲ್ಲಿ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿದ್ದಾರೆ.

ಕರ್ಯ್ೂ ಸಂದರ್ಭದಲ್ಲಿ ಪೊಲೀಸರು ಕಟ್ಟುನಿಟ್ಟಿನ ಜಾರಿಯನ್ನು ತೋರಿಸುವ ಸಲುವಾಗಿ ರಸ್ತೆಯಲ್ಲಿ ನಾವು ಹೇಳುವ ಕಾರಣವನ್ನೂ ಕೇಳದೇ ನನ್ನ ಆಟೋ ವಶಕ್ಕೆ ಪಡೆದರು, ಅದಾಗಿ ತಿಂಗಳಾದರೂ ವಾಹನ ಪಡೆಯಲು ಸಾಧ್ಯವಾಗಿಲ್ಲ, ನಮ್ಮ ಆದಾಯದ ಮೂಲವಾಗಿರುವ ವಾಹನ ಬಿಸಿಲಿನಲ್ಲಿ ಅನಾಥವಾಗಿವುದು ಕಣ್ಣೀರು ತರಿಸುತ್ತಿದೆ. ಮೋಹನಕುಮಾರ್, ಆಟೋ ಚಾಲಕ, ತುಮಕೂರು ಲಾಕ್‌ಡೌನ್ ಸಂದರ್ಭದಲ್ಲಿ ವಶಪಡಿಸಿಕೊಂಡ ಎಲ್ಲ ವಾಹನಗಳ ಮೇಲೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕಾನೂನು ರೀತಿಯಲ್ಲಿಯೇ ನಡೆದುಕೊಳ್ಳಬೇಕು, ನ್ಯಾಯಾಲಯದ ನಿರ್ದೇಶನದಂತೆ ನಾವು ನಡೆಯಬೇಕಿದ್ದು ನಾವು ಕಾಯುತ್ತಿದ್ದೇವೆ. ಎಲ್ಲ ವಾಹನಗಳನ್ನು ಒಟ್ಟಿಗೆ ಬಿಡುವ ಬಗ್ಗೆ ನಾವು ಚಿಂತನೆ ಮಾಡಿದ್ದೇವೆ. ಡಾ.ಕೆ.ವಂಶಿಕೃಷ್ಣ ಜಿಲ್ಲಾ ಪೊಲೀಸ್ ಅಧೀಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net