ನೀರಿನ ಘಟಕಗಳ ನಿರ್ವಹಣೆ ಸರಿಯಿಲ್ಲ

dj clk ro plant
Published on

ಚಳ್ಳಕೆರೆ: ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ ಹೇಳಿದರು.

ನಗರದ 31 ವಾರ್ಡುಗಳಲ್ಲಿ ಸಾರ್ವಜನಿಕ ಬಳಕೆಯಲ್ಲಿದ್ದ 35 ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಮಂಗಳವಾರ ಬೀಗ ಹಾಕಿ, ಏಕ ಪಕ್ಷೀಯವಾಗಿ

ಒಬ್ಬರೇ ನಿರ್ವಹಣೆ ಮಾಡಬೇಕು ಎಂದು ಜವಾಬ್ದಾರಿವಹಿಸಿ ಮಾತನಾಡಿ, ಖಾಸಗಿ ವ್ಯಕ್ತಿಗಳು ನಿರ್ವಹಣೆ ಮತ್ತು ಸಮಯ ಪಾಲನೆ ಮಾಡುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ನಗರದ ಶುದ್ಧ ಕುಡಿಯುವ ನೀರಿನ ಘಟಕಗಳ ಅವ್ಯವಸ್ಥೆಯ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು. ಘಟಕಗಳ ನಿರ್ವಹಣೆಯನ್ನು ರಾಜಕೀಯ ಮುಖಂಡರು ಮತ್ತು ಕೆಲ ಜನಪ್ರತಿನಿಧಿಗಳು ವಹಿಸಿಕೊಂಡಿದ್ದು, ಯಾವುದೇ ನಿಗಾ ವಹಿಸುತ್ತಿಲ್ಲ.

ಕೆಲ ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ರಿಪೇರಿಯಾಗಿ ವರ್ಷಗಳೇ ಕಳೆದಿದ್ದರೂ ದುರಸ್ತಿ ನಡೆದಿಲ್ಲ. ಘಟಕದ ಪರಿಕರಗಳು ಕಳ್ಳರ ಪಾಲಾಗುತ್ತಿವೆ ಎಂದು ಪತ್ರಿಕೆ ಎಚ್ಚರಿಸಿತ್ತು.

ಸರಿಯಾದ ನಿರ್ವಹಣೆ ಇಲ್ಲದೆ ಕೆಲ ಘಟಕಗಳು ಕೆಟ್ಟು ನಿಂತಿವೆ. ಇತ್ತೀಚಿಗೆ ಕಾವಡಿಗರಹಟ್ಟಿ ಕುಡಿಯುವ ನೀರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕ್ರಮ ಕೈಗೊಳ್ಳಲಾಗಿದೆ.

ದಾವಣಗೆರೆಯ ಟೆಂಡರ್‌ದಾರರಿಗೆ ನಗರದ ಕುಡಿಯುವ ನೀರಿನ ಘಟಕಗಳ ಸುಪರ್ದಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ನಿರ್ವಹಣೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ನಗರಸಭೆ ಇಂಜಿನಿಯರ್ ಲೋಕೇಶ್, ಎಇಇ ವಿನಯ್, ಚೇತನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net