ಬಿಡದಿ: ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಬೆನ್ನಲ್ಲೇ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಜಾಲಿವುಡ್ ಸ್ಟುಡಿಯೋಸ್ಗೆ ಜಿಲ್ಲಾಡಳಿತ ಮಂಗಳವಾರ ಬೀಗ ಜಡಿದಿದೆ. ಇದರೊಂದಿಗೆ ಪ್ರತಿಷ್ಠಿತ ಚಾನಲ್ ಒಂದರಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ತಾತ್ಕಾಲಿಕ ಬಂದ್ ಆಗಿದೆ.
ಮಂಗಳವಾರ ರಾಮನಗರ ತಹಸೀಲ್ದಾರ್ ತೇಜಸ್ವಿನಿ ನೇತೃತ್ವದ ಅಧಿಕಾರಿಗಳ ತಂಡ ಸ್ಟುಡಿಯೋದ ಎಲ್ಲ ನಾಲ್ಕೂ ಪ್ರವೇಶ ದ್ವಾರಗಳಿಗೆ ಬೀಗ ಹಾಕಿ ಸೀಲ್ ಮಾಡಿದೆ. ಅನುಮತಿ ಪಡೆಯದೆ ಹಾಗೂ ಬಳಕೆಯಾದ ನೀರನ್ನು ಸಂಸ್ಕರಣೆ ಮಾಡದೆ ಹೊರಗೆ ಬಿಡುತ್ತಿದ್ದ ಕ್ರಮ ವಿರೋಧಿಸಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯು ಅ. 6ರಂದು ವೆಲ್ಸ್ ಸ್ಟುಡಿಯೋಸ್ ಮತ್ತು ಎಂಟರ್ಟೈನ್ಮೆಂಟ್ ಪ್ರೆವೇಟ್ ಲಿಮಿಟೆಡ್ (ಜಾಲಿವುಡ್ ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್)ಗೆ ನೋಟಿಸ್ ಜಾರಿ ಮಾಡಿ, ತಕ್ಷಣದಿಂದಲೇ ಕಾರ್ಯ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಎಲ್ಲ ಚಟುವಟಿಕೆ ನಿಲ್ಲಿಸುವಂತೆ ಸೂಚಿಸಿತ್ತು. ನಂತರ ಕಾರ್ಯಾಚರಣೆ ನಡೆಸಿ ಇಡೀ ಸ್ಟುಡಿಯೋ ಬಂದ್ ಮಾಡಿಸಿದೆ.
ನೋಟಿಸ್ನಲ್ಲಿ ಏನಿದೆ?
ಸುಮಾರು 35 ಎಕರೆ ವಿಸ್ತೀರ್ಣದಲ್ಲಿರುವ ಈ ಸ್ಟುಡಿಯೋದಲ್ಲಿ ಬಳಕೆ ಮಾಡಿದ ನೀರನ್ನು ಶುದ್ಧೀಕರಣ ಮಾಡಿ ಮರು ಬಳಕೆ ಮಾಡುತ್ತಿಲ್ಲ. ಅಗತ್ಯವಾದ ಒಪ್ಪಿಗೆ ಪಡೆಯದೆಯೇ ಬಳಸಲಾಗುತ್ತಿದೆ ಎಂದು ಮಂಡಳಿ ನೋಟಿಸ್ನಲ್ಲಿ ಉಲ್ಲೇಖಿಸಿದೆ. ಸಂಸ್ಥೆ ಹಲವು ನಿಯಮ ಉಲ್ಲಂಘನೆ ಮಾಡಿರುವುದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಚಟುವಟಿಕೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲು ಹಾಗೂ ನಿಗದಿತ ಅವಧಿಯೊಳಗೆ ಕಚೇರಿಗೆ ವಿವರಣೆ ಸಲ್ಲಿಸಲು ಸೂಚಿಸಿದೆ.
ಸ್ಥಳದಲ್ಲಿ ಅಹಿತಕರ ಟನೆ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಡುವಂತೆ ಕಂದಾಯ ಇಲಾಖೆ ಕೋರಿತ್ತು. ಈ ಹಿನ್ನೆಲೆಯಲ್ಲಿ ಭದ್ರತೆ ನೀಡಲಾಗಿತ್ತು. |ಆರ್.ಶ್ರೀನಿವಾಸಗೌಡ ಎಸ್ಪಿ, ಬೆಂಗಳೂರು ದಣ ಜಿಲ್ಲೆ
ಅಂತಿಮವಾಗಿ ಲಾಕ್: ಮಂಗಳವಾರ ಮಧ್ಯಾಹ್ನದ ವೇಳೆಗೆ ಕಂದಾಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಲು ಸ್ಟುಡಿಯೋಸ್ಗೆ ಆಗಮಿಸಿದ್ದರು. ಆದರೆ, ಸಂಸ್ಥೆಯ ಮ್ಯಾನೇಜ್ಮೆಂಟ್ ನೋಟಿಸ್ ಪಡೆದುಕೊಂಡಿಲ್ಲ. ಹಾಗಾಗಿ ತಹಸೀಲ್ದಾರ್ ತೇಜಸ್ವಿನಿ ಸಂಜೆ ವೇಳೆಗೆ ಖುದ್ದಾಗಿ ನೋಟಿಸ್ ನೀಡಿದರು. ಕಡೆಗೆ ಅಧಿಕಾರಿಗಳ ಮೂಲಕ ಸ್ಟುಡಿಯೋಸ್ನ ಮುಖ್ಯದ್ವಾರಕ್ಕೆ ಬೀಗ ಹಾಕಿಸಿ ಸೀಲ್ ಮಾಡಿಸಿದರು. ಬಳಿಕ ರಾತ್ರಿ 7.30ಕ್ಕೆ ಮತ್ತೆರಡು ಗೇಟ್ಗಳಿಗೆ ಬೀಗ ಜಡಿದರು. 8 ಗಂಟೆ ಸುಮಾರಿಗೆ ಬಿಗ್ ಬಾಸ್ ಸ್ಪರ್ಧಿಗಳು ಮತ್ತು ತಂತ್ರಜ್ಞರ ತಂಡವನ್ನು ಹೊರಗೆ ಕಳುಹಿಸಿ, ಮತ್ತೊಂದು ಗೇಟ್ಗೂ ಬೀಗ ಜಡಿಯಲಾಗಿದೆ.
ನಿಯಮ ಉಲ್ಲಂನೆ ಹಿನ್ನೆಲೆಯಲ್ಲಿ ಜಾಲಿವುಡ್ ಸ್ಟುಡಿಯೋಸ್ ಸಂಸ್ಥೆಗೆ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿತ್ತು. ಜಿಲ್ಲಾಡಳಿತದಿಂದ ನಾವು ನೋಟಿಸ್ ಕೊಡಲು ಬಂದರೆ ಸ್ವೀಕರಿಸದೆ ಉದ್ಧಟತನ ತೋರಿದ್ದರು. ನೋಟಿಸ್ ಕೊಟ್ಟು ಬಿಗ್ ಬಾಸ್ ಸ್ಪರ್ಧಿಗಳನ್ನ ಹೊರ ಕಳುಹಿಸಿ ಎಲ್ಲ ಗೇಟ್ಗಳಿಗೂ ಬೀಗ ಹಾಕಿ ಸೀಲ್ ಮಾಡಲಾಗಿದೆ. |ತೇಜಸ್ವಿನಿ ತಹಸೀಲ್ದಾರ್, ರಾಮನಗರ