ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಖಾಸಗಿ ಚಾಲಕರಿಗೆ ನೆರವು ನೀಡಿ; ಗ್ರೇಡ್-2 ತಹಸೀಲ್ದಾರ್‌ಗೆ ಚಾಲಕರ ಮನವಿ

010520 Devadurga Private Drivers Appeal
Published on

ದೇವದುರ್ಗ: ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಒಂದೂವರೆ ತಿಂಗಳಿನಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಖಾಸಗಿ ವಾಹನ ಚಾಲಕರು, ಆಟೋ, ಟಂಟಂ, ಗೂಡ್ಸ್ ವಾಹನಗಳ ಡ್ರೈವರ್‌ಗಳಿಗೆ ಸಹಾಯ ನೀಡುವಂತೆ ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್ ಚಾಪಲ್‌ಗೆ ನಮ್ಮ ಚಾಲಕರ ಟ್ರೇಡ್ ಯೂನಿಯನ್ ಗುರುವಾರ ಮನವಿ ಸಲ್ಲಿಸಿತು.

ಖಾಸಗಿ ವಾಹನಗಳ ಸಂಚಾರವಿಲ್ಲದೆ ದುಡಿಮೆ ನಂಬಿ ಬದುಕುತ್ತಿದ್ದ ಹಲವು ಚಾಲಕ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಹಲವು ಡ್ರೈವರ್‌ಗಳು ಕಂತಿನ ಮೇಲೆ ವಾಹನ ಖರೀದಿ ಮಾಡಿ, ಜೀವನ ನಡೆಸುತ್ತಿದ್ದರು. ದುಡಿಮೆ ಇಲ್ಲದೆ ಎರಡ್ಮೂರು ತಿಂಗಳ ಕಂತುಗಳು ಡಿವ್ ಉಳಿದಿವೆ. ಇತ್ತ ದುಡಿಮೆ ಇಲ್ಲದೆ ಜೀವನ ನಡೆಸುವುದು ದುಸ್ಥರವಾಗಿ ಎಂದು ಮನವಿಯಲ್ಲಿ ನೋವು ತೋಡಿಕೊಂಡಿದ್ದಾರೆ.

ಕೂಡಲೇ ತಾಲೂಕಿನ ಎಲ್ಲ ಮಾದರಿಯ ವಾಹನ ಚಾಲಕರು, ಆಟೋ, ಟಂಟಂ, ಗೂಡ್ಸ್ ಗಾಡಿ ಡ್ರೈವರ್‌ಗಳಿಗೆ ಅಗತ್ಯ ಪಡಿತರ ಧಾನ್ಯಗಳನ್ನು ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು. ಸಂಘದ ತಾಲೂಕು ಅಧ್ಯಕ್ಷ ಯೋಗಪಯ್ಯ, ಎಚ್.ಶಿವರಾಜ ಸೇರಿ ಸದಸ್ಯರು, ವಾಹನ ಚಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net