ಬೀಗ ಮುರಿದು ಬಂಗಾರ-ಹಣ ಕಳ್ಳತನ

Published on

ಹೂವಿನಹಡಗಲಿ: ತಾಲೂಕಿನ ಇಟ್ಟಿಗಿ ಗ್ರಾಮದ ಮನೆ ಬೀಗ ಮುರಿದು ಹಣ ಹಾಗೂ ಆಭರಣ ಕಳ್ಳತನ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಮನೆಯ ತಿಜೋರಿಯಲ್ಲಿದ್ದ 8 ತೊಲ ಬಂಗಾರ, 80 ಸಾವಿರ ರೂ. ಕಳ್ಳತನ ಮಾಡಲಾಗಿದೆ.

ಗ್ರಾಮದ ರಾಜಶೇಖರ ಅವರು ಮನೆ ಬೀಗ ಹಾಕಿ ಇನ್ನೊಂದು ಮನೆಯಲ್ಲಿ ಮಲಗಿದ್ದರು. ಶುಕ್ರವಾರ ಬೆಳಗ್ಗೆ ನೋಡಿದಾಗ ಮನೆ ಬೀಗ ಮುರಿದು ಕಳ್ಳತನ ಮಾಡಿರುವುದು ಕಂಡು ಬಂದಿದೆ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net