ಲೊಕೇಷನ್ ಟ್ರ‍್ಯಾಕ್: ಕೆಲ ಅಽಕಾರಿಗಳ ಕೆಟ್ಟ ಚಟ-ಶಾಸಕ

Dr.Shivaraj Patil
Dr.Shivaraj Patil
Published on

ರಾಯಚೂರು ಲೊಕೇಷನ್ ಟ್ರ‍್ಯಾಕ್ ಮಾಡುವುದು ಕೆಲ ಅಽಕಾರಿಗಳ ಕೆಟ್ಟ ಚಟವಾಗಿದೆ. ಈ ವಯಸ್ಸಿನಲ್ಲಿ ನನಗೆ ಯಾರು ಹನಿಟ್ರ‍್ಯಾಪ್ ಮಾಡುತ್ತಾರೆ ನನಗೆ ಗೊತ್ತಿಲ್ಲ. ಈ ಕುರಿತು ಪ್ರಕರಣ ದಾಖಲಿಸಿದರೆ, ೪ ಜನ ಪೊಲೀಸ್ ಅಽಕಾರಿಗಳು ಅಮಾನತು ಅಗುತ್ತರೆಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲವರು ನನ್ನ ಮೊಬೈಲ್‌ನ ಲೊಕೇಷನ್ ಟ್ರ‍್ಯಾಕ್ ಮಾಡುತ್ತಾರೆ ಇವರಿಗೆ ಏನು ಲಾಭ ಬರುತ್ತದೆ ನನಗೆ ತಿಳಿದಿಲ್ಲ. ನಾನೇನು ಇತರರಂತೆ ಅಕ್ಕಿ ಮಾರಾಟ, ಮರಳು ದಂದೆ, ಇಸ್ಪೀಟ್ ದಂದೆ, ಐಪಿಎಲ್ ಬೆಟ್ಟಿಂಗ್ ಆಡಿಸುವವನಲ್ಲ. ಯಾರು ಯಾವ ಲೊಕೇಷನ್ ಟ್ರಾ÷್ಯಕ್ ಮಾಡಿದರೂ ಏನು ಆಗುವುದಿಲ್ಲ ಲೊಕೇಷನ್ ತೆಗೆದುಕೊಂಡು ಏನು ಮಾಡುತ್ತಾರೆ ಮಾಡಲಿ ಎಂದರು.

ದೂರು ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ಹೇಳುವ ಇಲಾಖೆ, ದೂರು ಕೊಟ್ಟರೆ ರಾಜ್ಯದಲ್ಲಿ ಯಾವ ಸಮಸ್ಯೆಗಳು ಬಗೆಹರಿದಿವೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಸರ್ಕಾರದ ಇಲಾಖೆಗಳಲ್ಲಿ ಕಮಿಷನ್ ದಂದೆ ನಡೆದಿದೆ ಎಂದು ಗುತ್ತಿಗೆದಾರರು ಆರೋಪ ಮಾಡುತ್ತಿದ್ದು, ಅದಕ್ಕೆ ಡಿಸಿಎಂ ಅವರೇ ಹೇಳಿದ್ದಾರೆ ಲೋಕಾಯುಕ್ತಕ್ಕೆ ದೂರು ನೀಡಿ ಎಂದು ಹೇಳುತ್ತಿದ್ದು, ಲೋಕಾಯುಕ್ತದಿಂದ ರಾಜ್ಯ ಸರ್ಕಾರದ ಮೇಲೆ ಯಾವ ಪರಿಣಾಮವೂ ಬೀಳುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆಂದು ಅಸಮಾಧಾನ ವ್ಯಕ್ತ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net