

ಲೋಕಾಪುರ: ಪಟ್ಟಣದ ಕಾಯಿಪಲ್ಲೆ ಬಜಾರನಲ್ಲಿ ಪಟ್ಟಣ ಪಂಚಾಯತಿ ವತಿಯಿಂದ ನಿರ್ಮಿಸುತ್ತಿರುವ ಶೌಚಗೃಹಕ್ಕೆ ಸ್ಥಳೀಯರು ಭಾನುವಾರ ವಿರೋಧ ವ್ಯಕ್ತಪಡಿಸಿದರು.
ರಸ್ತೆಯ ಪಕ್ಕದಲ್ಲೇ ಶೌಚಗೃಹ ನಿರ್ಮಿಸುವುದರಿಂದ ಸುತ್ತಮುತ್ತಲಿನ ಪರಿಸರ ಮಲಿನಗೊಳ್ಳುತ್ತದೆ. ಬೇರೆ ಜಾಗದಲ್ಲಿ ಶೌಚಾಲಯ ನಿರ್ಮಿಸಿದರೆ ನಮ್ಮ ಅಭ್ಯಂತರವಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದರು.
ಈಶ್ವರ ಹವಳಖೋಡ ಮಾತನಾಡಿ, ಕೇವಲ ಶೌಚಗೃಹ ನಿರ್ಮಿಸಿದರೆ ಸಾಲದು. ಅದರ ಜತೆಗೆ ಸ್ವಚ್ಛತೆಗೂ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಕಾಯಿಪಲ್ಲೆ ಮಾರ್ಕೆಟ್ ಜಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಅಂಗಡಿ ಮಾಲೀಕ ಮುರಗೇಶ ಕೊಣ್ಣೂರ ಮಾತನಾಡಿ, ಶೌಚಗೃಹ ನಿರ್ಮಿಸುವ ಜಾಗದಲ್ಲಿ ಚರಂಡಿಗಳು ಅವೈಜ್ಞಾನಿಕವಾಗಿವೆ. ಆದ್ದರಿಂದ ಬೇರೆ ಜಾಗದಲ್ಲಿ ನಿರ್ಮಿಸುವಂತೆ ಒತ್ತಾಯಿಸಿದರು.
ಕುಬೇರ ಬಾಗಲೆ, ಶ್ರೀಧರ ರಂಗೋಜಿ, ಶ್ರೀಶೈಲ ಪಲ್ಲೇದ, ಸಂಗಮೇಶ ಶಿಲವಂತರ, ಸದಾನಂದ ಬೋಳಿಶೆಟ್ಟಿ, ಅಜ್ಜಪ್ಪ ಹವಳಖೋಡ, ಶಾನೂರ ಭಾಗವಾನ, ಡಾ. ಬಾರಡ್ಡಿ, ಶಂಭು ಕೊಣ್ಣೂರ, ಮಹೇಶ ಕೊಣ್ಣೂರ ಇದ್ದರು.