ನೇಲಡ್ಕದಲ್ಲಿ ಈಡೇರದ ಸೇತುವೆ ಬೇಡಿಕೆ: ವಾಹನಗಳ ಸಂಚಾರಕ್ಕೆ ತೊಂದರೆ : ಬ್ರಿಡ್ಜ್ ನಿರ್ಮಾಣಕ್ಕೆ ಸ್ಥಳೀಯರಿಂದ ಆಗ್ರಹ

New Project (4)
Published on

ವಿಜಯವಾಣಿ ಸುದ್ದಿಜಾಲ ಕಡಬ

ರಾಮಕುಂಜ ಮತ್ತು ಕೊಯಿಲ ಗ್ರಾಮ ಸಂಪರ್ಕಿಸುವ ನೇಲಡ್ಕದ ಹೊಳೆಗೆ ಅಡ್ಡಲಾಗಿದ್ದ ಕಿರಿದಾದ ಸೇತುವೆ ತೆರವುಗೊಳಿಸಿ ಬದಲಿಗೆ ಹೊಸ ಸೇತುವೆ ನಿರ್ಮಿಸುವಂತೆ ಮುಂದಿರಿಸಲಾಗಿದ್ದ ಪ್ರಸ್ತಾಪ ನನೆಗುದಿಗೆ ಬಿದ್ದಿದೆ.

ರಾಮಕುಂಜ, ಕೊಯಿಲ ಗ್ರಾಮದ ಸಂಪರ್ಕ ಕೊಂಡಿಯಾಗಿರುವ ಈ ಸೇತುವೆಯಲ್ಲಿ ಲಘು ವಾಹನಗಳೇ ಹರಸಾಹಸದಿಂದ ಸಂಚರಿಸುತ್ತಿದ್ದು, ಇತ್ತೀಚೆಗೆ ಬೃಹತ್ ಮರ ಉರುಳಿ ಸೇತುವೆಗೆ ಹಾನಿಯಾಗಿದೆ. ತೋಡಿನಲ್ಲಿ ನೀರು ಹರಿವಿಗೂ ಅಡಚಣೆಯಾಗಿದ್ದು, ಪಕ್ಕದ ತೋಟಗಳಿಗೆ ನೀರು ಹರಿದು ಕೃಷಿಕರಿಗೆ ನಷ್ಟವಾಗಿದೆ. ಪ್ರತಿ ವರ್ಷವೂ ಮಳೆಗಾಲ ಆರಂಭವಾದ ಮೇಲೆ ಸ್ಥಳೀಯರು ತಮ್ಮ ವಾಹನಗಳನ್ನು ಸೇತುವೆ ಪಕ್ಕ ನಿಲುಗಡೆಗೊಳಿಸಿ ಕಾಲ್ನಡಿಗೆಯಲ್ಲಿ ತೆರಳುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ.

ಸ್ಥಳಕ್ಕೆ ಶಾಸಕಿ ಭೇಟಿ: ನೇಲಡ್ಕದ ಸೇತುವೆ ಸ್ಥಳಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದರು. ರಾಮಕುಂಜ ಗ್ರಾಪಂ ಅಧ್ಯಕ್ಷೆ ಸುಚೇತಾ, ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸದಸ್ಯರಾದ ಪ್ರಶಾಂತ್ ಆರ್.ಕೆ., ಪ್ರದೀಪ್ ಬಾಂತೋಟ್ಟು, ಪ್ರಮುಖರಾದ ಪ್ರದೀಪ್ ರೈ ಮನವಳಿಕೆ, ಕೃಷ್ಣ ಎಂ.ಆರ್, ಶಿವಪ್ರಸಾದ್ ರೈ ಮೈಲಾರಿ, ಲಕ್ಷ್ಮೀನಾರಾಯಣ ರಾವ್ ಆತೂರು, ಸದಾಶಿವ ಶೆಟ್ಟಿ ಮಾರಂಗ, ಮುತ್ತಪ್ಪ ಗೌಡ ನೇಲಡ್ಕ, ಬಾಬು ಶೆಟ್ಟಿ ನೇಲಡ್ಕ, ಸುಬ್ಬಣ್ಣ ಶೆಟ್ಟಿ ನೇಲಡ್ಕ, ಕರಿಯ ಗಾಣಂತಿ, ಜಗದೀಶ ಕೊಂಡಪ್ಪಾಡಿ ಉಪಸ್ಥಿತರಿದ್ದರು.

ನೇಲಡ್ಕ ಎಂಬಲ್ಲಿನ ಹೊಳೆಗೆ ಅಡ್ಡಲಾಗಿ ಬೃಹದಾಕಾರದ ಮರ ಬಿದ್ದಿರುವುದರಿಂದ ಮಳೆ ನೀರು ಕೃಷಿ ತೋಟಗಳಿಗೆ ಹರಿಯುತ್ತಿದೆ. ಅಲ್ಲದೆ ಸೇತುವೆಗೂ ಹಾನಿಯಾಗಿದೆ. ಇಲ್ಲಿ ಸುಸಜ್ಜಿತ ಸೇತುವೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸುತ್ತಲೇ ಬರುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಶೀಘ್ರ ಪೂರೈಸಿ. ಸುಬ್ಬಣ್ಣ ಶೆಟ್ಟಿ ನೇಲಡ್ಕ, ಸ್ಥಳೀಯ ನೇಲಡ್ಕ ಎಂಬಲ್ಲಿನ ಕಿರು ಸೇತುವೆ ಅಪಾಯದ ಹಂತದಲ್ಲಿದ್ದು ಇದೇ ಕಿರು ಸೇತುವೆಯನ್ನು ನಾವು ಅವಲಂಬಿಸಿದ್ದೇವೆ. ಈ ಕಿರು ಸೇತುವೆಯಲ್ಲಿ 108 ಆಂಬುಲೆನ್ಸ್, ಇನ್ನಿತರ ವಾಹನ ಸಂಚರಿಸಲಾಗದೇ ಇಲ್ಲಿನ ಅನೇಕ ಕುಟುಂಬ ಕಷ್ಟ ಅನುಭವಿಸುತ್ತಿದ್ದೇವೆ. ಸರ್ಕಾರ ಆದಷ್ಟು ಶೀಘ್ರ ಸೇತುವೆ ನಿರ್ಮಾಣ ಮಾಡಿಕೊಡುವಂತೆ ವಿನಂತಿ ಮಾಡುತ್ತೇವೆ. ಮುತ್ತಪ್ಪ ಗೌಡ ನೇಲಡ್ಕ ವಿಕಲ ಚೇತನರ ಪುನರ್ವಸತಿ ಕಾರ್ಯಕರ್ತ ಕಿರು ಸೇತುವೆಗೆ ಬದಲಾಗಿ ಘನ ವಾಹನ ಸಂಚರಿಸುವಂತಹ ಸೇತುವೆ ಬೇಡಿಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ನಲ್ಲಿ ಅಂದಾಜು ಪಟ್ಟಿ ತಯಾರಿಸಲು ಸೂಚಿಸಿದ್ದೇನೆ. ಸಂಬಂಧಪಟ್ಟ ಇಲಾಖೆ ಮೂಲಕ ಅನುದಾನಕ್ಕಾಗಿ ಪ್ರಯತ್ನಿಸಲಾಗುವುದು. ಭಾಗೀರಥಿ ಮುರುಳ್ಯ ಶಾಸಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net