

ಕಂಪ್ಲಿ: ವಾರದ ಸಂತೆ ಮಾರುಕಟ್ಟೆ ಪ್ರದರ್ಶನಕ್ಕೆ ಸೀಮಿತವಾಗದೆ ಸ್ಥಳೀಯ ಉತ್ಪನ್ನಗಳ ಮಾರುಕಟ್ಟೆಯಾಗಿ ಮಾರ್ಪಡಾಗಬೇಕು ಎಂದು ಜಿಪಂ ಯೋಜನಾ ನಿರ್ದೇಶಕ ವಿನೋದ್‌ಕುಮಾರ್ ಹೇಳಿದರು.
ಇದನ್ನೂ ಓದಿ: ಚಿಲ್ಲಿ ಮಾರುಕಟ್ಟೆ ತ್ವರಿತಗತಿಯಲ್ಲಿ ಆರಂಭಿಸಿ
ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಜೀವಿನಿ ಒಕ್ಕೂಟದ ವಾರದ ಸಂತೆಗೆ ಚಾಲನೆ ನೀಡಿ ಮಾತನಾಡಿದರು. ಸ್ಥಳೀಯ ಉತ್ಪನ್ನ ಮಾರುಕಟ್ಟೆಗೆ ಸಂತೆ ವರದಾನವಾಗಿದೆ. ಮಹಿಳಾ ವ್ಯಾಪಾರಿಗಳಿಗೆ ಛತ್ರಿ ಅಥವಾ ತಾತ್ಕಾಲಿಕ ಶೆಡ್‌ಗಳ ವ್ಯವಸ್ಥೆ ಕಲ್ಪಿಸಿ ಪ್ರೋತ್ಸಾಹಿಸಬೇಕು ಎಂದರು.
ತಾಪಂ ಇಒ ಆರ್.ಕೆ.ಶ್ರೀಕುಮಾರ್ ಮಾತನಾಡಿ, ಗ್ರಾಮದಲ್ಲಿ ವಾರದ ಸಂತೆ ಇಲ್ಲದೆ ಉತ್ಪನ್ನಗಳನ್ನು ಮನೆಮನೆಗೆ ತೆರಳಿ ಮಾರಾಟ ಮಾಡಲಾಗುತ್ತಿತ್ತು. ಸಂತೆ ವ್ಯವಸ್ಥೆ ಕಲ್ಪಿಸಿದ್ದರಿಂದ ಸ್ಥಳೀಯ ಉತ್ಪನ್ನಗಳ ಮಾರಾಟದಿಂದ ಆರ್ಥಿಕ ಚಟುವಟಿಕೆಗಳಿಗೆ ಉತ್ತಮ ಅವಕಾಶ ದೊರೆತಂತಾಗಿದೆ ಎಂದು ತಿಳಿಸಿದರು.
ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ವಿಜಯಕುಮಾರ್, ಪಿಡಿಒ ಬೀರಲಿಂಗ, ಕಾರ್ಯದರ್ಶಿ ಎಚ್.ಹುಲುಗಪ್ಪ, ಗ್ರಾಪಂ ಅಧ್ಯಕ್ಷೆ ಸಿ.ಡಿ.ಗುಂಡಮ್ಮ, ಉಪಾಧ್ಯಕ್ಷ ನೇಣ್ಕಿ ಗಿರೀಶ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಎಚ್.ಲಕ್ಷ್ಮೀ, ಕಾರ್ಯದರ್ಶಿ ಕುರುಬರ ರತ್ನಮ್ಮ, ಟಿಪಿಎಂ ಮೇಲ್ವಿಚಾರಕಿ ಎನ್.ಪಾರ್ವತಿ, ಪ್ರಮುಖರಾದ ಎಚ್.ಕುಮಾರಸ್ವಾಮಿ, ಗಂಗಾಧರ, ಮಹಾಂತೇಶ, ಸಿ.ಡಿ.ಚಿದಾನಂದ, ಎನ್.ಗುಂಡಪ್ಪ ಇತರರಿದ್ದರು.