ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ : ಚೀಟಿ ಎತ್ತಿ ಮೀಸಲಾತಿ ನಿರ್ಣಯ

New Project (4)
Published on

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳಿಗೆ ಮುಂಚಿತವಾಗಿ, ಕಾರಡ್ಕ, ಮಂಜೇಶ್ವರ, ಕಾಞಂಗಾಡ್ ಬ್ಲಾಕ್‌ಗಳ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿನ ಕ್ಷೇತ್ರ, ವಾರ್ಡ್‌ಗಳಿಗೆ ಮೀಸಲಾತಿ ಆದೇಶವನ್ನು ಚೀಟಿ ಎತ್ತುವ ಮೂಲಕ ತೀರ್ಮಾನಿಸಲಾಯಿತು.

ಆಯಾ ಬ್ಲಾಕ್ ವ್ಯಾಪ್ತಿಗೆ ಬರುವ ಗ್ರಾಪಂಗೆ ವಾರ್ಡ್ ಮೀಸಲಾತಿ ನಿರ್ಣಯದ ಬಗ್ಗೆ ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ಚೀಟಿ ಎತ್ತಲಾಯಿತು. ಸ್ಥಳೀಯಾಡಳಿತ ಆಡಳಿತ ಇಲಾಖೆ ಜಂಟಿ ನಿರ್ದೇಶಕ ಆರ್.ಶೈನಿ, ಉಪನಿರ್ದೇಶಕ ಕೆ.ವಿ.ಹರಿದಾಸ್, ಚುನಾವಣಾ ಅಪರ ಜಿಲ್ಲಾಧಿಕಾರಿ ಗೋಪಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಕಾಞಂಗಾಡ್, ಮಂಜೇಶ್ವರಂ ಕಾರಡ್ಕ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಗ್ರಾಪಂ ವಾರ್ಡ್‌ಗಳ ಮಹಿಳೆಯರು, ಪರಿಶಿಷ್ಟ ಜಾತಿ ಮಹಿಳೆಯರು, ಪರಿಶಿಷ್ಟ ಪಂಗಡದ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಗಳಿಗೆ ಮೀಸಲಾಗಿರುವ ಸ್ಥಾನಗಳ ಸಂಖ್ಯೆಯನ್ನು ಯಾವ ಕ್ಷೇತ್ರಗಳಿಗೆ ಪುನರಾವರ್ತನೆಯ ಕ್ರಮದಲ್ಲಿ ಹಂಚಬೇಕು, ಯಾವ ವಾರ್ಡ್‌ಗಳನ್ನು ನೀಡಬೇಕು ಎಂಬ ಬಗ್ಗೆ ಚೀಟಿ ಎತ್ತುವ ಮೂಲಕ ನಿರ್ಣಯಿಸಲಾಯಿತು.

ಬ್ಲಾಕ್ ಪಂಚಾಯಿತಿಗಳಲ್ಲಿನ ಕ್ಷೇತ್ರಗಳ ಮೀಸಲಾತಿಯನ್ನು ನಿರ್ಣಯ ಚೀಟಿ ಎತ್ತುವ ಪ್ರಕ್ರಿಯೆ ಅ.18ರಂದು ಬೆಳಗ್ಗೆ 10ಕ್ಕೆ, ಜಿಪಂ ಕ್ಷೇತ್ರಗಳಿಗೆ ಮೀಸಲಾತಿ ನಿರ್ಧರಿಸಲು ಲಾಟರಿ ಎತ್ತುವ ಕಾರ್ಯ ಅ.21ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ. ಬ್ಲಾಕ್ ಪಂಚಾಯಿತಿ ಮೀಸಲಾತಿ ವಾರ್ಡ್‌ಗಳ ಡ್ರಾ ಅ.18ರಂದು ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net