ಠೇವಣಿ ತೊಡಗಿಸಿದಲ್ಲಿ ಸಾಲ ಒದಗಿಸಲು ಸಾಧ್ಯ

3sor3
ಸೊರಬದಲ್ಲಿ ಹಮ್ಮಿಕೊಂಡಿದ್ದ ಶ್ರೀ ನಾರಾಯಣ ಗುರು ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಎಚ್.ನಾರಾಯಣರಾವ್ ಮಾತನಾಡಿದರು. ಕೃಷ್ಣಪ್ಪ ಶಿಗ್ಗಾ, ತಮ್ಮಣ್ಣಪ್ಪ, ಜಗದೀಶ್, ಗೀತಾ, ಶಿವಾನಂದ, ನವೀನ್, ಪಾಣಿ ರಾಜಪ್ಪ ಇತರರಿದ್ದರು.
Published on

ಸೊರಬ: ಸಹಕಾರ ಸಂಘಗಳ ಬೆಳವಣಿಗೆಗೆ ಷೇರುದಾರರ ಸಹಭಾಗಿತ್ವ ಅಗತ್ಯ. ಸಂಘದಲ್ಲಿ ಷೇರುದಾರರು ಹೆಚ್ಚಿನ ಪ್ರಮಾಣದಲ್ಲಿ ಠೇವಣಿಯನ್ನು ತೊಡಗಿಸಿದಾಗ ಸದಸ್ಯರಿಗೆ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಶ್ರೀ ನಾರಾಯಣಗುರು ಸಹಕಾರ ಸಂಘದ ಅಧ್ಯಕ್ಷ ಎಚ್.ನಾರಾಯಣ ರಾವ್ ಹೇಳಿದರು.

ಭಾನುವಾರ ಪಟ್ಟಣದ ಗುರುಭವನದಲ್ಲಿ ಶ್ರೀ ನಾರಾಯಣ ಗುರು ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಒಗ್ಗಟ್ಟು ಮತ್ತು ಆರ್ಥಿಕ ಬೆಳವಣಿಗೆಗಾಗಿ ಸ್ಥಾಪನೆಯಾಗಿರುವ ಸಹಕಾರ ಸಂಘಕ್ಕೆ ಸಮಾಜದವರು ಹೆಚ್ಚು ಸಂಖ್ಯೆಯಲ್ಲಿ ಸದಸ್ಯತ್ವವನ್ನು ಪಡೆದುಕೊಂಡು ಅಽಕ ಪ್ರಮಾಣದಲ್ಲಿ ಷೇರನ್ನು ಸಂಘದಲ್ಲಿ ತೊಡಗಿಸಿದಾಗ ಸದಸ್ಯರಿಗೆ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ. ಸಂಘದ ಬೆಳವಣಿಗೆಗೆ ಎಲ್ಲರ ಸಹಕಾರ ಮತ್ತು ಸ್ಪಂದನೆ ಮುಖ್ಯ ಎಂದರು.
ಸAಘಕ್ಕೆ ಸ್ವಂತ ಕಟ್ಟಡದ ಅಗತ್ಯವಿದ್ದು ಮುಂಬರುವ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಸಂಘದಲ್ಲಿ ಸದಸ್ಯರು ಸಕಾಲಕ್ಕೆ ಸರಿಯಾಗಿ ಸಾಲ ಮರುಪಾವತಿಸುತ್ತಿದ್ದಾರೆ. ಸಂಘ ಪ್ರಸ್ತುತ 953 ಸದಸ್ಯರನ್ನು ಹೊಂದಿದ್ದು 4.10 ಲಕ್ಷ ರೂ. ಲಾಭ ಹೊಂದಿದ್ದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನದಲ್ಲಿ ಸಂಘದ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.
ಸAಘದ ನಿರ್ದೇಶಕ ಕೃಷ್ಣಪ್ಪ ಶಿಗ್ಗಾ, ತಮ್ಮಣ್ಣಪ್ಪ, ಜಗದೀಶ್ ಕುಳವಳ್ಳಿ, ಗೀತಾ ಕೋರಕೋಡು, ಶಿವಾನಂದ ಪಾಣಿ, ಕಾರ್ಯನಿರ್ವಹಣಾಽಕಾರಿ ನವೀನ್ ಕುಮಾರ್, ಸದಸ್ಯರಾದ ಪಾಣಿ ರಾಜಪ್ಪ, ಎಂ.ಡಿ.ಉಮೇಶ್, ನಾಗರಾಜ್ ಚಿಕ್ಕಸವಿ, ರವಿ ಕಲ್ಲಂಬಿ, ಜಿ.ಎಂ.ತೋಟಪ್ಪ, ಕೆ.ಜಿ.ಬಸವರಾಜ್, ಪ್ರವೀಣ್, ಲಕ್ಷ÷್ಮಣಪ್ಪ ನಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net