

ಮೈಸೂರು: ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ ಸ್ಥಾಪಿಸಬಯುವವರಿಗೆ ಮೇಲಾಧಾರ ನೀಡುವಿಕೆ, ಕಠಿಣವಾದ ದಾಖಲೆಪತ್ರ ನೀಡಿಕೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಉದ್ಯಮ ಸ್ಥಾಪಿಸಬಯಸುವುದು ಸುಲಭದ ಮಾತಾಗಿಲ್ಲ. ಈ ನಿಟ್ಟಿನಲ್ಲಿ ತಮ್ಮ ಕಿನಾರಾ ಕ್ಯಾಪಿಟಲ್ ಯಾವುದೇ ಮೇಲಾಧಾರವಿಲ್ಲದೆ, ಸುಲಭ ವಿಧಾನಗಳ ಮೂಲಕ ಒಂದರಿಂದ 30 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಲಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕರಾದ ತಿರುನಾವುಕ್ಕರಸು ತಿಳಿಸಿದರು.
ಆಹಾರ, ಮೆಷಿನರಿ, ಎಲೆಕ್ಟಿಕಲ್, ಮೆಟಲ್ ವರ್ಕ್ಸ್, ಮೂಲ ಸೌಕರ್ಯ ಸೇವೆ ಮೊದಲಾದವುಗಳಿಗೆ ಸಂಸ್ಥೆ ಈ ಸಾಲ ನೀಡುತ್ತಿದೆ. ಈ ವರ್ಷ ರಾಜ್ಯದಲ್ಲಿ ಸುಮಾರು 575 ಕೋಟಿಗೂ ಹೆಚ್ಚು ಈ ರೀತಿಯ ವ್ಯಾಪಾರ ಸಾಲ ನೀಡಲಿದ್ದು, ಮೈಸೂರು ಭಾಗಕ್ಕೂ ಗರಿಷ್ಠ ಪ್ರಮಾಣದಲ್ಲಿ ಸಾಲ ಮೀಸಲಿಟ್ಟಿದ್ದು, ಈ ಭಾಗದವರು ಮನೆ ಬಾಗಿಲ ಸೇವೆ ಮೂಲಕ ಸಾಲ ಪಡೆಯಬಹುದಾಗಿದೆ. ಕಂಪನಿ ಈಗಾಗಲೇ ಬೆಂಗಳೂರು ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೀಗಾಗಿ ಮೈಸೂರಿನಲ್ಲಿಯೂ ಸೇವೆಗೆ ಆದ್ಯತೆ ಒದಗಿಸಲು ನಿರ್ಧರಿಸಿದೆ. ಈಗಲೂ ಸಹಾ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ ಪಡೆಯಬಯಸುವವರು ಬ್ಯಾಂಕ್ ಹಾಗೂ ಇತರೆ ಹಣಕಾಸು ಸಂಸ್ಥೆಗಳಿಗೆ ಸಾಲಕ್ಕಾಗಿ ಹೋದ ವೇಳೆ ಶೇ. 60 ರಷ್ಟು ಸಮಯದಲ್ಲಿ ಹಲವಾರು ದಾಖಲಾತಿ, ಮೇಲಾಧಾರ, ಇನ್ನಿತರ ಸಮಸ್ಯೆ ಎದುರಾಗುತ್ತವೆ. ಆದರೆ ಈ ರೀತಿಯ ಗೊಂದಲ ತಮ್ಮ ಕಂಪನಿಯಲ್ಲಿಲ್ಲ. ಕಂಪನಿ ಸಿಬ್ಬಂದಿಯೇ ಸಾಲ ಪಡೆಯಬಯಸುವವರಿದ್ದೆಡೆಗೆ ಬಂದು, ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಎರಡರಿಂದ ಮೂರು ದಿನಗಳೊಳಗೆ ಸಾಲದ ಹಣ ಬ್ಯಾಂಕ್ ಖಾತೆಗೆ ಜಮಾ ಆಗುವಂತೆ ನೋಡಿಕೊಳ್ಳುತ್ತಾರೆ ಎಂದು ವಿವರಿಸಿದರು.
ಅಲ್ಲದೆ, ಕೈಗಾರಿಕೆಗಳ ಮಾಲೀಕರಿಗೆ ಸುಲಭವಾಗುವ ರೀತಿಯಲ್ಲಿ ಮೈ ಕಿನಾರಾ ಆಪ್ ಸಿದ್ಧಪಡಿಸಲಾಗಿದೆ. ಇದು ಕನ್ನಡದಲ್ಲಿಯೂ ಇದೆ. ಈ ಹಣಕಾಸು ವರ್ಷದಲ್ಲಿ ಸುಮಾರು 575 ಕೋಟಿ ರೂ., ಸಾಲ ನೀಡಲು ಉದ್ದೇಶಿಸಲಾಗಿದ್ದು, ಇದರಿಂದ ಆರು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ.
ದೀರ್ಘಾವಧಿ, ಅಲ್ಪಾವಧಿ ದುಡಿಯುವ ಬಂಡವಾಳ, ಯಂತ್ರೋಪಕರಣಗಳ ಖರೀದಿ, ಬಿಲ್ ರಿಯಾಯಿತಿ, ಇದರೊಡನೆ 300 ಉಪ ವಲಯಗಳಿಗೆ ಮಹಿಳೆಯರಿಗಾಗಿ ಹರ್ ವಿಕಾಸ್ ಎಂಬ ವಿಶೇಷ ರಿಯಾಯಿತಿಯ ಸಾಲ ಸೌಲಭ್ಯವಿದೆ. ಆಹಾರ ಉತ್ಪನ್ನಗಳು, ನಿರ್ಮಾಣ ಸಾಮಗ್ರಿ, ಯಂತ್ರ ಘಟಕ, ಜವಳಿ, ಫ್ಯಾಬ್ರಿಕೇಷನ್, ಆಟೋ ಘಟಕ, ಆಟೋ ಮೊಬೈಲ್ ಮೊದಲಾದವಕ್ಕೆ ಸಂಬಂಧಿಸಿದ ಉದ್ಯಮ ಸ್ಥಾಪಿಸಬಯಸುವ ಸಾವಿರಾರು ಮಂದಿ ಈಗಾಗಲೇ ಕಂಪನಿಯ ಉಪಯೋಗ ಪಡೆದಿದ್ದಾರೆ. ಕಂಪನಿಯು ರಿಸರ್ವ್ ಬ್ಯಾಂಕ್‌ನಿಂದ ಅರ್ಹತೆ ಪಡೆದಿದ್ದು, ಬಾಂಬೆ ಸ್ಟಾಕ್ ಎಕ್ಸ್ಚೇಂಜ್‌ನಲ್ಲಿಯೂ ಗುರುತಿಸಲ್ಪಟ್ಟಿರುವುದು ಕಂಪನಿಯ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ ಎಂದು ಮಾಹಿತಿ ನೀಡಿದರು.
ಜೊತೆಗೆ ಹೆಚ್ಚಿನ ಮಾಹಿತಿಗೆ ಕೆಐಎನ್‌ಎಆರ್‌ಎಸಿಎಪಿಐಟಿಎಎಲ್.ಸಿಒಎಂ ಗೆ ಭೇಟಿ ನೀಡಬಹುದಾಗಿದೆ ಎಂದು ಕೋರಿದರು. ಕಂಪನಿಯ ಇನ್ನಿತರ ಅಧಿಕಾರಿಗಳು ಹಾಜರಿದ್ದರು.