

ಕುಡಚಿ: ರೈತರಿಗಾಗಿ ಸರ್ಕಾರದಿಂದ ಅನೇಕ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ರೈತರು ಅವುಗಳ ಸದುಪಯೋಗದೊಂದಿಗೆ ಆರ್ಥಿಕವಾಗಿ ಸದೃಢರಾಗಬೇಕು ಎಂದು ಬೆಳಗಾವಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಸಾಬ ಕುಲಗುಡೆ ಹೇಳಿದರು.
ಸಮೀಪದ ನಿಲಜಿ ಗ್ರಾಮದ ಲಗಳಿ ತೋಟದಲ್ಲಿ ಶ್ರೀ ಲಕ್ಷ್ಮೀದೇವಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು.
ಶಿವಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೈತರಿಗೆ ಸಾಲದ ಚೆಕ್ ವಿತರಿಸಲಾಯಿತು. ಬಿಡಿಸಿಸಿ ಬ್ಯಾಂಕ್ ತಾಲೂಕು ನಿಯಂತ್ರಣಾಧಿಕಾರಿ ಶಿವಾನಂದ ಪಾಟೀಲ, ಬ್ಯಾಂಕ್ ನಿರೀಕ್ಷಕ ಶ್ರೀಧರ ಪಾಟೀಲ, ನಿಂಗಪ್ಪ ಕರೆನ್ನವರ, ಸಂಘದ ಅಧ್ಯಕ್ಷ ಕಲ್ಲಪ್ಪ ಅಲಬಾಳ, ಉಪಾಧ್ಯಕ್ಷ ರಮೇಶ ಲಗಳಿ, ಎಸ್.ಎಸ್.ಮಗದುಮ, ಸಂಘದ ಕಾರ್ಯದರ್ಶಿ ಸದಾಶಿವ ಲಗಳಿ ಇತರರು ಇದ್ದರು