ಬಡ್ಡಿದಂಧೆಕೋರ ಕಾರ್ತಿಕ ಬಂಧನ

crime
Published on

ಹುಬ್ಬಳ್ಳಿ: ಬಡ್ಡಿಗಾರನ ಕಿರುಕುಳದಿಂದ ಮನನೊಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ವಿದ್ಯಾನಗರ ಪೊಲೀಸರು ಬಡ್ಡಿಕೋರನನ್ನು ಗುರುವಾರ ಸಂಜೆ ಬಂಧಿಸಿದ್ದಾರೆ.

ಇಲ್ಲಿನ ಸೆಟ್ಲಮೆಂಟ್‌ನ ಕಾರ್ತಿಕ ಬಳ್ಳಾರಿ ಬಂಧಿತ. ಈತ ಕುಂದಗೋಳ ತಾಲೂಕು ಯಲಿವಾಳ ಗ್ರಾಮದ ಶಿವಾನಂದ ಕಳ್ಳಿಮನಿ (36) ಎಂಬುವರಿಗೆ 4ಲಕ್ಷ ರೂ. ಸಾಲ ಕೊಟ್ಟು ಅದಕ್ಕೆ ದುಪ್ಪಟ್ಟು ಬಡ್ಡಿ, ಚಕ್ರ ಬಡ್ಡಿ ವಸೂಲಿ ಮಾಡಿದ್ದ. ಅಲ್ಲದೇ ಇನ್ನೂ ಹೆಚ್ಚಿನ ಬಡ್ಡಿ ಕೊಡುವಂತೆ ಕಿರುಕುಳ ಕೊಟ್ಟಿದ್ದ. ಇದರಿಂದ ಮನನೊಂದು ಶಿವಾನಂದ ಆತ್ಮಹತ್ಯೆ ಮಾಡಿಕೊಂಡಿದ್ದ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಬಿದ್ದ ಪೊಲೀಸರು, ನಗರದಲ್ಲಿ ಕಾರ್ತಿಕನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net