ಸಾಲ ಮರುಪಾವತಿಗೆ ಕಾಲಾವಕಾಶ ನೀಡಿ

010101
Published on

ಮೂಡಲಗಿ: ಪಟ್ಟಣದಲ್ಲಿನ ಮಹಿಳೆಯರು ಮೈಕ್ರೋಫೈನಾನ್ಸ್‌ಗಳಲ್ಲಿ ಪಡೆದಿರುವ ಸಾಲ ತುಂಬಲು 5 ತಿಂಗಳ ಕಾಲಾವಕಾಶ ನೀಡಲು ಸೂಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಗರುಡ ಸಂಸ್ಥೆ ಹಾಗೂ ಮಹಿಳೆಯರು ತಹಸೀಲ್ದಾರ್ ಕಚೇರಿ ಶಿರಸ್ತೇದಾರ ರಾಜು ಕಡಕೋಳ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಲಾಕ್‌ಡೌನ್ ನಂತರ ಕೆಲಸವಿಲ್ಲದೆ ಆರ್ಥಿಕ ಸಮಸ್ಯೆಯಾಗಿದೆ. ಹೀಗಾಗಿ ಸಾಲ ಮರುಪಾವತಿ ಮಾಡಲು ಕಾಲಾವಕಾಶ ನೀಡಬೇಕು ಎಂದು ಮನವಿ ಮೂಲಕ ಕೋರಿದರು. ಪ್ರಕಾಶ ಮಾದರ, ಯಶವಂತ ಸರ್ವಿ, ಲಕ್ಷ್ಮಣ ಮೆಳ್ಳಿಗೇರಿ, ಸಂಗೀತಾ ಹೂಗಾರ, ಭಾರತಿ ಕಾಂಳೆ, ಮಹಾದೇವ ಶೆಕ್ಕಿ, ಈರಪ್ಪ ಢವಳೇಶ್ವರ, ಅಶೋಕ ಶಿದ್ಲಿಂಗಪ್ಪಗೋಳ, ಸುರೇಶ ಸಣ್ಣಕ್ಕಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net