ಸಾಲ ಮರುಪಾವತಿಗೆ 3 ತಿಂಗಳ ಅವಕಾಶ ನೀಡಲಿ: ವಿವಿಧ ಸ್ವಸಹಾಯ ಸಂಘದ ಸದಸ್ಯರ ಒತ್ತಾಯ

060620 Raichur NGOs Appeal to DC
Published on

ರಾಯಚೂರು: ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಪಡೆದ ಸಾಲ ಮರು ಪಾವತಿಗೆ ಕಾಲಾವಕಾಶ ನೀಡುವಂತೆ ಸಂಬಂಧಿಸಿದ ಬ್ಯಾಂಕ್ ಮತ್ತು ಫೈನಾನ್ಸ್‌ಗಳಿಗೆ ಸೂಚಿಸುವಂತೆ ಒತ್ತಾಯಿಸಿ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ನಗರದ ಡಿಸಿ ಕಚೇರಿ ಸ್ಥಾನಿಕ ಅಧಿಕಾರಿ ಆಸೀಫ್‌ಗೆ ಶನಿವಾರ ಮನವಿ ಸಲ್ಲಿಸಿದರು.

ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಸರ್ಕಾರ ಮೂರು ತಿಂಗಳ ಸಾಲ ಮರುಪಾವತಿಗೆ ಸಮಯವಕಾಶ ನೀಡಿತ್ತು. ಇದೀಗ ಲಾಕ್‌ಡೌನ್ ತೆಗೆದು ಹಾಕಿರುವುದರಿಂದ ಕೆಲ ಬ್ಯಾಂಕ್ ಮತ್ತು ಫೈನಾನ್ಸ್ ಕಂಪನಿಯವರು ಸಾಲ ಮರುಪಾವತಿಸಲು ಮನೆಗೆ ಬಂದು ಒತ್ತಾಯಿಸುತ್ತಿದ್ದಾರೆ ಎಂದು ದೂರಿದರು. ಎಲ್‌ಎನ್‌ಟಿ, ಗ್ರಾಮಶಕ್ತಿ , ಹಿಂದುಸ್ತಾನ್, ಆರ್‌ಎಲ್‌ಬಿ, ಜನಲಕ್ಷ್ಮೀ, ಗ್ರಾಮಕೂಟ, ಸ್ಪಂದನಾ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರಿಗೆ ಮರುಪಾವತಿಗೆ ಸದ್ಯ ಮುಂದಿನ ಮೂರು ತಿಂಗಳ ಕಾಲ ವಿನಾಯಿತಿ ನೀಡುವಂತೆ ಒತ್ತಾಯಿಸಿದರು. ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಾದ ಗೌಸೀಯಾ, ಆಫ್ರಿನ್, ಲಕ್ಷ್ಮೀ, ಭಾಗ್ಯಮ್ಮ, ಹಸೀನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net