ಸಾಲ ಮರುಪಾವತಿಸಿ ಸಹಕರಿಸಲಿ

5
Published on

ಮಾಂಜರಿ: ಸಹಕಾರಿ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ಬೆಳವಣಿಗೆ ಹೊಂದಬೇಕಾದರೆ ಗ್ರಾಹಕರ, ಸದಸ್ಯರ ಹಾಗೂ ಆಡಳಿತ ಮಂಡಳಿ ಸಹಕಾರ ಅವಶ್ಯ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಮಾಂಜರಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀ ಪಿಡಿಎಫ್ ಸೊಸೈಟಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಸ್ಥೆಗಳ ಸ್ಥಾಪನೆ ಮುಖ್ಯವಲ್ಲ. ಬದಲಿಗೆ ಅವುಗಳನ್ನು ಪ್ರಗತಿಯಲ್ಲಿ ಕೊಂಡೊಯ್ಯಬೇಕು. ಸಹಕಾರಿ ಸಂಸ್ಥೆಗಳು ಒಳ್ಳೆಯ ಕಾರ್ಯನಿರ್ವಹಿಸುವ ಮೂಲಕ ಆರ್ಥಿಕ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿವೆ. ಗ್ರಾಹಕರು ಸಕಾಲಕ್ಕೆ ಸಾಲ ಮರುಪಾವತಿಸಿ ಸಹಕಾರಿ ಪ್ರಗತಿಗೆ ಶ್ರಮಿಸಬೇಕು ಎಂದರು.

ದತ್ತ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಹಮಾರಿ ಯಾದವ, ಜಿಪಂ ಮಾಜಿ ಸದಸ್ಯ ಅಜಿತ ಚೌಗುಲಾ, ಪಿಕೆಪಿಎಸ್ ಅಧ್ಯಕ್ಷ ಮೋಹನ ಲೋಕರೆ, ಸಂಸ್ಥೆ ಅಧ್ಯಕ್ಷ ಜ್ಯೋತಿರಾಮ ಯಾದವ, ಉಪಾಧ್ಯಕ್ಷ ಶಿವಾಜಿ ಮನೆ, ಶೋಭಾ ಯಾದವ, ನಿರ್ದೇಶಕರಾದ ಸುಶಾಂತ ಯಾದವ, ಅಶೋಕ ಹಿಂದುಳೆ, ದೀಪಕ ಗಾಯಕವಾಡ, ಸಂದೀಪ ವಾಡಕರ, ಧನಜಿ ಭೀಲವಡೆ, ನಿತಿನ ಚವ್ಹಾಣ, ಸಿಕಂದರ್ ತಾಂಬುಳಿ, ಆರತಿ ಯಾದವ, ಜ್ಯೋತಿ ಖಡಕೆ, ಶಾಂತೇಶ ಕುರನೆ, ಮಲ್ಲಿಕಾರ್ಜುನ ನಿರ್ವಹಣೆ, ದುರ್ಯೋಧನ ವಸವಾಡೆ, ಶ್ರೀಧರ ಭೋಜಕರ, ದಾದಾಸೋ ಭೋಜಕರ, ಅಶೋಕ ಹವಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net