ಸಾಲ ಮಾಡಿ ಬಡವರಿಗೆ ನೆರವು

01
Published on

ಸಂಬರಗಿ: ಸಮೀಪದ ಮದಬಾವಿ ಗ್ರಾಮದ ಚರ್ಮದ ಉದ್ಯೋಗ ಮಾಡುವ ಬಡ ಕುಟುಂಬದ ಸಂಜಯ ಅದಾಟೆ ಅವರು 70 ಸಾವಿರ ರೂ. ಸಾಲ ಮಾಡಿ ಲಾಕ್‌ಡೌನ್‌ನಿಂದ ಸಮಸ್ಯೆ ಅನುಭವಿಸುತ್ತಿರುವ ಸುಮಾರು 600 ಕುಟುಂಬಗಳಿಗೆ ತಲಾ 5 ಕೆಜಿ ಗೋಧಿ ನೀಡುವ ಮೂಲಕ ಮಾದರಿಯಾಗಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಅನೇಕ ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ. ಜನರ ಕಷ್ಟ ಕಂಡ ಸಂಜಯ ಮಹಾರಾಷ್ಟ್ರದ ಅರಗ ಗ್ರಾಮದಿಂದ 3 ಟನ್ ಗೋಧಿ ಖರೀದಿಸಿ ತಂದು ಕುಟುಂಬಸ್ಥರ ನೆರವಿನೊಂದಿಗೆ ಬಡವರಿಗೆ ವಿತರಿಸುತ್ತಿದ್ದಾರೆ. ಸಂಜಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net