

ಹಿರೇಕೆರೂರ: ಪಿಎಂಈಜಿಪಿ ಯೋಜನೆಯಡಿ 10 ಲಕ್ಷ ರೂ. ಲೋನ್ ಕೊಡಿಸುವುದಾಗಿ ವ್ಯಕ್ತಿಯೊಬ್ಬನಿಗೆ 2.48 ಲಕ್ಷ ರೂ. ಮೋಸ ಮಾಡಿದ ಕುರಿತು ಇಲ್ಲಿಯ ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಬಸರಿಹಳ್ಳಿ ನಿವಾಸಿ ಪ್ರಕಾಶ ಅಜ್ಜಪ್ಪ ಕುಡಪಲಿ (39) ಮೋಸ ಹೋದವರು.
ಇವರ ಫೆಸ್‌ಬುಕ್ ಖಾತೆಗೆ ಶಹರಾಭಾನು ಹಾಗೂ ಅಸಿಬುದ್ದಿನ್ ಎಂಬುವರು ಪಿಎಂಈಜಿಪಿ ಸ್ಕಿಮ್‌ನಲ್ಲಿ 10 ಲಕ್ಷ ರೂ. ಲೋನ್ ಮಾಡಿಕೊಡುತ್ತೇವೆ ಎಂದು ಒಂದು ಲಿಂಕ್‌ಅನ್ನು ಕಳುಹಿಸಿದ್ದಾರೆ. ಅದರ ಮೂಲಕ ಪ್ರಕಾಶ ಅವರ ಖಾತೆಯಿಂದ 2.48 ಲಕ್ಷ ರೂ. ತಮ್ಮ ಖಾತೆಗೆ ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.