ಸರ್ಕಾರಿ ಸಾಲ ಪಡೆದು ಉದ್ಯೋಗ ಆರಂಭಿಸಿ

24-msk-1
Published on

ಮಸ್ಕಿ: ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸ್ವ ಸಹಾಯ ಸಂಘಗಳು ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಸಂಘಗಳಲ್ಲಿ ಸಕ್ರಿಯವಾಗಿ ತೊಡಗಬೇಕು ಎಂದು ತಾ.ಪಂ. ಇಒ ಅಮರೇಶ ಸಲಹೆ ನೀಡಿದರು.

ಕನ್ನಾಳ ಗ್ರಾ.ಪಂ.ನಲ್ಲಿ ಸಂಪೂರ್ಣತಾ ಅಭಿಯಾನದಡಿ ಶ್ರೀ ಆಂಜನೇಯ ಸಂಜೀವಿನಿ ಒಕ್ಕೂಟದ ಸದಸ್ಯರಿಗಾಗಿ ಏರ್ಪಡಿಸಿದ್ದ ಸ್ವತ್ತು ನಿಧಿಯ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲೂ ಸ್ವ ಸಹಾಯ ಗುಂಪುಗಳಿಗೆ ಸರ್ಕಾರ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುತ್ತಿದೆ. ಆಸಕ್ತ ಮಹಿಳೆಯರು ಸರ್ಕಾರದಿಂದ ಸಾಲ ಪಡೆದು ಉದ್ಯೋಗ ಆರಂಭಿಸುವಂತೆ ತಿಳಿಸಿದರು.

ಮಹಿಳೆಯರು ಉಪ್ಪಿನಕಾಯಿ, ರೊಟ್ಟಿ, ಅಗರಬತ್ತಿ, ಕಾಯಿಪಲ್ಯ ಮಾರಾಟ ಮುಂತಾದ ಉದ್ಯೋಗ ಮಾಡುವ ಮೂಲಕ ಆರ್ಥಿಕ ಸದೃಢತೆ ಹೊಂದಬಹುದು. ಮಹಿಳೆಯರು ಆರ್ಥಿಕವಾಗಿ ಸದೃಢರಾದರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಹಕಾರಿಯಾಗುತ್ತದೆ ಎಂದು ಇಒ ಅಮರೇಶ ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ, ಸದಸ್ಯ ಸಂಗಣ್ಣ, ಸ್ವ ಸಹಾಯ ಒಕ್ಕೂಟದ ಅಧ್ಯಕ್ಷೆ ಸುನಂದಾ, ಪಿಡಿಒ ಮಲ್ಲಿಕಾರ್ಜುನ, ಪ್ರಮುಖರಾದ ಅಶೋಕ ಮಡ್ಡಿಕರ್, ಪಂಪಣ್ಣ, ಮೌನೇಶ, ಪ್ರಕಾಶ, ಅಶ್ವಿನಿ, ಲಲಿತಾ, ಕಂಟೆಮ್ಮ ಸುಮಂಗಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net