ಸಾಲ ಸದ್ಬಳಕೆ ಜತೆಗೆ ಪ್ರಗತಿ ಸಾಧಿಸಲಿ

17Huk2
Published on

ಹುಕ್ಕೇರಿ: ಕೃಷಿ ಪ್ರಗತಿ ದೇಶದ ಅಭಿವೃದ್ಧಿಗೆ ಪೂರಕ. ಆ ನಿಟ್ಟಿನಲ್ಲಿ ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಒದಗಿಸಬೇಕೆಂದು ಕೆನರಾ ಬ್ಯಾಂಕ್ ಹುಬ್ಬಳ್ಳಿ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕಿ ವಿಜಯಶ್ರೀ ತಿಳಿಸಿದರು.

ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರೈತ ಸಮ್ಮೇಳನ, ಸಾಲ ವಿತರಣೆ ಮತ್ತು ಜಾಗತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಪಡೆದ ಸಾಲ ಸದ್ಬಳಕೆಯ ಜತೆಗೆ ಪ್ರಗತಿ ಸಾಧಿಸಬೇಕು. ರೈತ ಮಹಿಳೆಯರಿಗೆ ಬ್ಯಾಂಕ್‌ನಿಂದ ಜಾರಿಗೊಳಿಸಿದ ಯೋಜನೆ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಕರೆ ನೀಡಿದರು.

ಬೆಂಗಳೂರ ಪ್ರಧಾನ ಕಚೇರಿ ವ್ಯವಸ್ಥಾಪಕ ಕೆ.ಮಂಜುನಾಥ ಮತ್ತು ಹುಬ್ಬಳ್ಳಿ ವಿಭಾಗದ ಎಜಿ ಆರ್.ಕೆ.ಜಿನ್ನಾ ಮಾತನಾಡಿ, ಪ್ರಥಮವಾಗಿ ಸಾಲ ವಿತರಿಸಿದ ಗರಿಮೆ ಕೆನರಾ(ಸಿಂಡಿಕೇಟ್) ಬ್ಯಾಂಕಿನದ್ದಾಗಿದೆ ಎಂದು ಹೇಳಿದರು. ರೈತರು ಹಾಗೂ ವಿವಿಧ ಗ್ರಾಹಕರಿಗೂ ಸಾಲ ವಿತರಿಸುವ ಮೂಲಕ ಗ್ರಾಹಕ ಸ್ನೇಹಿ ಬ್ಯಾಂಕ್ ಎಂದು ಗುರುತಿಸಿಕೊಂಡಿದೆ ಎಂದರು.

ಉಪ ಪ್ರಧಾನ ವ್ಯವಸ್ಥಾಪಕಿ ವಿಜಯಶ್ರೀ ಮತ್ತು ಇತರರನ್ನು ಸನ್ಮಾನಿಸಲಾಯಿತು. ಚಿಕ್ಕೋಡಿ ಪ್ರಾದೇಶಿಕ ಕಚೇರಿ ಕಾರ್ತೀಕಕುಮಾರ ಶ್ಯಾಂಡಿಲ್ಯ, ಗ್ರಾಪಂ ಅಧ್ಯಕ್ಷ ಭೀಮಗೌಡ ಪಾಟೀಲ, ರೈತ ಮುಖಂಡ ಸುರೇಶ ವಂಟಮೂರಿ, ನೇಮಣ್ಣ ಮಗದುಮ್ಮ, ಅಶೋಕ ಪಾಟೀಲ, ಎಚ್.ಎಲ್.ಪೂಜೇರಿ, ರಾಜಶ್ರೀ ಲಕ್ಕುಂಡಿ, ಶ್ರೇಯಾ ಮಗದುಮ್ಮ, ಸಂಜೀವಕುಮಾರ ಮಗದುಮ್ಮ ಇತರರಿದ್ದರು. ಮೀನಾಕ್ಷಿ ಸಾಂಘವಿ ಸ್ವಾಗತಿಸಿದರು. ರಮೇಶ ಜೈಕರ ನಿರೂಪಿಸಿದರು. ಶಾಖಾ ವ್ಯವಸ್ಥಾಪಕ ಸಾಗರ ವಾನಖಡೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net