ಲೋನ್ ಕೊಡುವ ನೆಪದಲ್ಲಿ 73 ಸಾವಿರ ರೂ. ಮೋಸ

Crime Logo
Published on

ಹಾವೇರಿ: ಫೆಸ್‌ಬುಕ್‌ನಲ್ಲಿ ಲೋನ್ ಕೊಡುವ ಧ್ವನಿ ಆ್ಯಪ್‌ನ ನಂಬರ್ ಕರೆ ಮಾಡಿದ ಲೋನ್ ಕೇಳಿದ ವ್ಯಕ್ತಿಗೆ 73 ಸಾವಿರ ರೂ. ಮೋಸ ಮಾಡಿದ ಘಟನೆ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಗುತ್ತಲದ ಹನುಮಂತಪ್ಪ ಪರಶುರಾಮ ಲಮಾಣಿ (34) ಮೋಸ ಹೋದ ವ್ಯಕ್ತಿ.
ಈತ ಫೆಸ್‌ಬುಕ್‌ನಲ್ಲಿ ಲೋನ್ ಕೊಡುವ ಧ್ವನಿ ಆ್ಯಪ್‌ನಲ್ಲಿ ಬಂದ ಮೊಬೈಲ್ ನಂಬರ್‌ಗೆ ಕರೆ ಮಾಡಿ ಲೋನ್ ಕೊಡುವಂತೆ ಕೇಳಿದ್ದಾನೆ. ಅದಕ್ಕಾಗಿ ಫೋನ್‌ನಲ್ಲಿ ಮಾತನಾಡಿದ ವ್ಯಕ್ತಿ ಲೋನ್ ಪ್ರೋಸೆಸ್, ಜಿಎಸ್‌ಟಿ ಹಾಗೂ ಸರ್ವೀಸ್ ಟ್ಯಾಕ್ಸ್‌ಗಾಗಿ 73 ಸಾವಿರ ರೂ. ಹಾಕಿದರೆ ಮಾತ್ರ ಲೋನ್ ಬರುತ್ತದೆ ಎಂದು ತಿಳಿಸಿದ್ದಾನೆ. ಅದರಂತೆ ಈತ ಹಣ ಹಾಕಿದ್ದಾನೆ. ನಂತರ ಹಣ ಪಡೆದ ವ್ಯಕ್ತಿ ಲೋನ್ ಕೊಡದೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net