ಯೂನಿಯನ್ ಬ್ಯಾಂಕ್​ನಿಂದ ಲೋನ್ ಮೇಳ

New VSV New
Published on

ಹುಬ್ಬಳ್ಳಿ : ಅವಳಿ ನಗರದ ಜನರಿಗೆ ಒಂದೇ ಸೂರಿನಡಿಯಲ್ಲಿ ಯೂನಿಯನ್ ಬ್ಯಾಂಕ್ ಲೋನ್ ಮೇಳ ಆಯೋಜಿಸಿರುವುದು ಉತ್ತಮ ಕಾರ್ಯ. ಜನರಿಗೆ ಒಳ್ಳೆಯದ್ದನ್ನು ಮಾಡಬೇಕೆಂಬ ಬ್ಯಾಂಕಿನ ಉದ್ದೇಶ ಸಾರ್ವಜನಿಕರಿಗೆ ತಲುಪುವಂತಾಗಲಿ ಎಂದು ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.<

ಇಲ್ಲಿನ ಇಂದಿರಾ ಗ್ಲಾಸ್​ಹೌಸ್​ನಲ್ಲಿ ಯೂನಿಯನ್ ಬ್ಯಾಂಕ್ ಹಮ್ಮಿಕೊಂಡಿದ್ದ ಮೆಗಾ ರಿಟೇಲ್ ಎಕ್ಸ್ ಪೋ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್ಚಿನ ಗ್ರಾಹಕರು ತಮ್ಮ ಕನಸ್ಸುಗಳನ್ನು ನನಸು ಮಾಡಿಕೊಳ್ಳಲು ಇಂದೊದು ಸುಸಂದರ್ಭ. ಹೋಮ್ ಲೋನ್, ಉದ್ಯಮ ಸಾಲ, ಎಜುಕೇಶನ್ ಲೋನ್, ಕಾರ್ ಲೋನ್, ಪರ್ಸನಲ್ ಲೋನ್​ಗಳನ್ನು ಪಡೆದು ಅವುಗಳನ್ನು ಮರುಪಾವತಿಸುವ ಮೂಲಕ ಒಳ್ಳೆಯ ಗ್ರಾಹಕರಾಗಿರಿ ಎಂದರು.

ಇದೇ ಸಂದರ್ಭದಲ್ಲಿ ಗ್ರಾಹಕರಿಗೆ ಸಾಲಪತ್ರಗಳನ್ನು ವಿತರಿಸಿದರು. ಯೂನಿಯನ್ ಬ್ಯಾಂಕ್ ವತಿಯಿಂದ ಗ್ರಾಹಕರಿಗೆ ಹೋಮ್ ಲೋನ್, ಪರ್ಸನಲ್ ಲೋನ್, ಎಜುಕೇಶನ್ ಲೋನ್, ವೆಹಿಕಲ್ ಲೋನ್ ಸೇರಿದಂತೆ ವಿವಿಧ ಸಾಲಗಳ ಮಾಹಿತಿಯನ್ನು ಗ್ರಾಹಕರಿಗೆ ನೀಡಲಾಯಿತು. ಯೂನಿಯನ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪ್ರಶಾಂತ ಪ್ರಭು, ಪ್ರಾದೇಶಿಕ ವ್ಯವಸ್ಥಾಪಕ ಭೈರೇಗೌಡ, ಉಪ ಪ್ರಾದೇಶಿಕ ವ್ಯವಸ್ಥಾಪಕ ರೀತೇಶ ಕುಮಾರ, ಉದ್ಯಮಿ ಬಸವರಾಜ ಏಕಲಾಸಪುರ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net