ಸಾಲ ಸೌಲಭ್ಯದ ಸದುಪಯೋಗ ಪಡೆಯಿರಿ

23ckd3-Web
ಬೆಳಕೂಡ ಗ್ರಾಮದ ಜೈ ಹನುಮಾನ ಕೃಷಿ ಪತ್ತಿನ ಸಹಕಾರಿ ಸಂಘದ ರೈತ ಸದಸ್ಯರಿಗೆ ಜಿಪಂ ಸದಸ್ಯ ಪವನ ಕತ್ತಿ ಅವರು ಕೃಷಿ ಸಾಲ ವಿತರಿಸಿದರು. ಸುರೇಶ ಬೆಲ್ಲದ, ನಟರಾಜ ಹಿರೇಮಠ ಇದ್ದರು.
Published on

ಚಿಕ್ಕೋಡಿ: ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರ ದಕ್ಷ ಆಡಳಿತದಿಂದ ಬ್ಯಾಂಕ್ ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪವನ ಕತ್ತಿ ಹೇಳಿದ್ದಾರೆ.

ತಾಲೂಕಿನ ಬೆಳಕೂಡ ಗ್ರಾಮದ ಜೈ ಹನುಮಾನ ಕೃಷಿ ಪತ್ತಿನ ಸಹಕಾರಿ ಸಂಘದ ರೈತ ಸದಸ್ಯರಿಗೆ ಶುಕ್ರವಾರ ಕೃಷಿ ಸಾಲ ವಿತರಿಸಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್ ಈಗಾಗಲೇ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಹೈನುಗಾರಿಕೆ ಹಾಗೂ ಸ್ವ-ಸಹಾಯ ಸಂಘಗಳಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶ ಹೊಂದಿದೆ. ಯುವಕರು ಲಾಭ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು. ಸಂಘದ ಅಧ್ಯಕ್ಷ ನಟರಾಜ ಹಿರೇಮಠ ಮಾತನಾಡಿ, ಸಂಘದಲ್ಲಿನ 208 ರೈತ ಸದಸ್ಯರಿಗೆ 1.59 ಕೋಟಿ ರೂ.ಗೂ ಅಧಿಕ ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ರೈತರಿಗೆ ರಸಗೊಬ್ಬರ, ಕೀಟನಾಶಕ ಹಾಗೂ ಪಡಿತರ ವಿತರಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು. ಹಿರಾಶುಗರ್ ನಿರ್ದೇಶಕ ಸುರೇಶ ಬೆಲ್ಲದ, ಬಸವರಾಜ ಉತ್ತುರೆ, ಸಂಘದ ಉಪಾಧ್ಯಕ್ಷ ಸಂಭಾಜಿ ಚವ್ಹಾಣ, ಮಲ್ಲಿಕಾರ್ಜುನ ಬೀಡ, ಸಿ.ಬಿ.ಅರಬಾವಿ, ಮಹಾಂತೇಶ ಯಶವಂತ, ಟಿ.ಎಸ್.ಮೋರೆ, ದೇವರಾಜ ಪಾಶ್ಚಾಪುರೆ, ಬಸವಣ್ಣಿ ಕವಣಿ, ಬಸವರಾಜ ಪಾಶ್ಚಾಪುರೆ, ನಂದಕುಮಾರ ಖಟಾವಿ ಹಾಗೂ ಸಂಘದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net