ವಾಣಿಜ್ಯ ಬೆಳೆಗಳಿಗೂ ಸಾಲ ವಿತರಣೆ

Untitled-5
ದೊಡ್ಡಬಳ್ಳಾಪುರದ ಪಿಎಲ್​ಡಿ ಬ್ಯಾಂಕ್​ ವಾರ್ಷಿಕ ಸಭೆಯಲ್ಲಿ ಬ್ಯಾಂಕ್​ನಿಂದ ಬೆಳೆ ಸಾಲ ಸೇರಿ ವಿವಿಧ ರೀತಿಯ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಿರುವ ರೈತರನ್ನು ಸನ್ಮಾನಿಸಲಾಯಿತು. ಬ್ಯಾಂಕ್​ ಉಪಾಧ್ಯಕ್ಷ ಎಲ್​.ಕೆ.ರಾಮಚಂದ್ರಬಾಬು, ನಿರ್ದೇಶಕರಾದ ಟಿ.ವಿ.ಲ್ಮಣಾರಾಯಣ್​, ಮುನಿಕೃಷ್ಣ, ಸಿ.ವಿ.ಲ್ಮಪತಯ್ಯ, ಸಿ.ಅಶ್ವತ್ಥನಾರಾಯಣಗೌಡ, ಜಿ.ನರಸಿಂಹಮೂರ್ತಿ, ರಾಮಾಂಜಿನಪ್ಪ, ಉಗ್ರಯ್ಯ, ಬಿ.ಬಸವರಾಜು, ವಿ.ವೇಣುಕುಮಾರ್​, ಸಿ.ಮುನಿಯಾನಾಯ್ಕ್​, ಲಕ್ಷಮ್ಮ, ರಾಜಲ್ಮ, ಆರ್​.ಶೋಭಾ, ಬ್ಯಾಂಕಿನ ವ್ಯವಸ್ಥಾಪಕ ಎಸ್​.ದಣಮೂರ್ತಿ ಇದ್ದರು.
Published on

ದೊಡ್ಡಬಳ್ಳಾಪುರ : ತಾಲೂಕಿನ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ 11,903 ಸದಸ್ಯರನ್ನು ಹೊಂದಿದ್ದು, ವಿವಿಧ ಬೆಳೆ ಬೆಳೆಯಲು ರೈತರಿಗೆ ಆರ್ಥಿಕವಾಗಿ ಊರುಗೋಲಾಗಿ ಕೆಲಸ ಮಾಡುತ್ತಿದೆ ಎಂದು ಬ್ಯಾಂಕ್​ ಅಧ್ಯಕ್ಷ ಆರ್​.ಸಿ.ಶಿವಕುಮಾರ್​ ಹೇಳಿದರು. ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ನಿಂದ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ರೈತರ ಅಭಿನಂದನಾ ಸಭೆಯಲ್ಲಿ ಮಾತನಾಡಿದರು. ಕೃಷಿಗೆ ಪೂರಕವಾಗಿವ ಕೋಳಿ ಸಾಕಾಣಿಕೆ ಹಾಗೂ ದ್ರಾ ಸೇರಿ ಎಲ್ಲ ರೀತಿಯ ವಾಣಿಜ್ಯ ಬೆಳೆ ಬೆಳೆಯಲು ರೈತರಿಗೆ ಸಾಲ ನೀಡುತ್ತಿದೆ. ಪ್ರಸ್ತುತ ರೈತರಿಗೆ ವಿವಿಧ ರೀತಿಯ 1.35 ಕೋಟಿ ರೂ. ಸಾಲ ನೀಡಲಾಗಿದೆ. ರೈತರು ಪಡೆದ ಬೆಳೆ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಉಳಿದ ರೈತರಿಗೂ ಸಾಲ ಸೌಲಭ್ಯ ನೀಡಲು ಸಹಕಾರಿಯಾಗಲಿದೆ. ಅಲ್ಲದೆ ಸಾಲ ಪಡೆದ ರೈತರಿಗೂ ಹೆಚ್ಚಿನ ಹೊರೆಯಾಗುವುದಿಲ್ಲ ಎಂದರು.

ಸರ್ಕಾರ ರೈತರ ಬೆಳೆ ಸಾಲ ಹಾಗೂ ಬಡ್ಡಿ ಮನ್ನಾ ಮಾಡುವಾಗ ಸಹಕಾರಿ ೇತ್ರದಲ್ಲಿ ಕೃಷಿಗೆ ಸಾಲ ಸೌಲಭ್ಯ ನೀಡುವ ಎಲ್ಲ ಬ್ಯಾಂಕ್​ಗಳಿಗೂ ಅನ್ವಯವಾಗಬೇಕು. ಆದರೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್​ಗಳಲ್ಲಿ ಪಡೆದ ಬೆಳೆ ಸಾಲ ಮಾತ್ರ ಮನ್ನಾ ಮಾಡುವ ನಿರ್ಧಾರದಿಂದ ಇತರೆ ಸಹಕಾರಿ ಬ್ಯಾಂಕ್​ಗಳಲ್ಲಿ ಸಾಲ ವಸೂಲಾತಿ ಕಷ್ಟವಾಗುತ್ತಿದೆ ಎಂದು ಹೇಳಿದರು.

ಸದಸ್ಯರಿಗೆ ತಿಳಿಯುವಂತೆ ಪ್ರಚಾರವಿಲ್ಲ : ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರ ಪರವಾಗಿ ಪ್ರಶ್ನೆ ಮಾಡಿದ ಬನವತಿ ರೈತ ಚಿಕ್ಕಕದರಪ್ಪ, ಬ್ಯಾಂಕಿನ ಚುನಾವಣೆಗೆ ಸಂಬಂಧಿಸಿದಂತೆ ತಾಲೂಕಿನ ಎಲ್ಲ ಸದಸ್ಯರಿಗೆ ತಿಳಿಯುವಂತೆ ಪ್ರಚಾರ ಮಾಡುವುದಿಲ್ಲ. ಕೆಲವರಷ್ಟೇ ನಿರ್ದೇಶಕರಾಗಿ ಆಯ್ಕೆಯಾಗಲು ಸಹಕಾರಿಯಾಗುವಂತೆ ಚುನಾವಣೆಯ ದಿನಾಂಕ ಪ್ರಕಟಿಸಲಾಗುತ್ತದೆ. ಇದರಿಂದ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಇರುವವರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಬ್ಯಾಂಕ್​ ನಿರ್ದೇಶಕ ಟಿ.ವಿ.ಲ್ಮಣಾರಾಯಣ್​, ಸಹಕಾರಿ ತತ್ವದ ಅಡಿಯಲ್ಲಿ ನಡೆಯುವ ಯಾವುದೇ ಸಂಸ್ಥೆಯಲ್ಲಿ ಮತದಾನದ ಹಕ್ಕು ಹಾಗೂ ಸ್ಪರ್ಧಿಸುವ ಅವಕಾಶ ದೊರೆಯಲು ಸಂಸ್ಥೆಯಲ್ಲಿ ವ್ಯವಹಾರ ನಡೆಸಬೇಕು ಮತ್ತು ಸರ್ವ ಸದಸ್ಯರ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಸದಸ್ಯತ್ವ ಪಡೆದ ಮಾತ್ರಕ್ಕೆ ಮತದಾನದ ಹಕ್ಕು ದೊರೆಯುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net