ಸಾಲಕ್ಕೆ ಹೆದರಿ ಮನೆ ಖಾಲಿ ಮಾಡಿರುವ ಗ್ರಾಮಸ್ಥರು

LOAN
Published on

ಕುಶಾಲನಗರ:

ಖಾಸಗಿ ಹಣಕಾಸು ಸಂಸ್ಥೆಗಳಿAದ ಸಾಲ ಪಡೆದವರು ಅದನ್ನು ತೀರಿಸಲಾಗದೆ ಊರು ಬಿಟ್ಟಿರುವ ಪ್ರಕರಣ ಕೊಡಗಿನಲ್ಲೂ ನಡೆದಿದೆ. ಕುಶಾಲನಗರ ತಾಲೂಕು ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು ಇರುವ ಕಡೆಗಳಲ್ಲಿ ಅವರ ದೌರ್ಬಲ್ಯ ಬಳಸಿಕೊಂಡು ಕೇವಲ ಆಧಾರ್ ಕಾರ್ಡ್, ವೋಟರ್ ಐಡಿ ಆಧಾರದ ಮೇಲೆ ಇಲ್ಲಿ ಸಾಲ ಕೊಡಲಾಗಿದೆ. ಸುಲಭ ಕಂತುಗಳು ತೀರಿಸಬಹುದು ಎಂದು ಹೇಳಿ 1ರಿಂದ 10 ಲಕ್ಷ ರೂ. ತನಕ ಸಾಲ ಕೊಟ್ಟು ನಂತರದ ದಿನಗಳಲ್ಲಿ ಬಡ್ಡಿ ಸೇರಿ ಭಾರಿ ಪ್ರಮಾಣದ ಸುಲಿಗೆ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಹಣ ಕೊಡದವರ ಮೇಲೆ ದೌರ್ಜನ್ಯವನ್ನೂ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಸೂಲಿಗೆ ಬರುವ ಹಣಕಾಸು ಸಂಸ್ಥೆಗಳವರಿಗೆ ಹೆದರಿ ಇರುವ ಮನೆಗಳಿಗೆ ಬೀಗ ಹಾಕಿ ಹಲವರು ಬೇರೆ ಕಡೆ ತೆರಳಿದ್ದಾರೆ.

ಹೊತ್ತಲ್ಲದ ಹೊತ್ತಿನಲ್ಲಿ, ಸಾಲಕೊಟ್ಟ ಖಾಸಗಿ ಹಣಕಾಸು ಸಂಸ್ಥೆಯ ಪ್ರತಿನಿಧಿಗಳು ಸಾಲ ತೆಗೆದುಕೊಂಡವರ ಮನೆಗಳಿಗೆ ನಿರಂತರ ದಾಳಿ ಮಾಡುತ್ತಿದ್ದಾರೆ.

ಕೆಲವರು ತಮ್ಮ ಮನೆಗಳನ್ನು ಕಡಿಮೆ ಬೆಲೆಗೆ ಮಾರಿ ಸಾಲ ತೀರಿಸಿದ್ದಾರೆ. ಸಾಲ ವಸೂಲಿಗೆ ಹೆದರಿ ಓಡಿ ಹೋದವರ ಮಕ್ಕಳು ಅನಾಥರಾಗಿ ಹಾಡಿಗಳಲ್ಲಿ ಅಲೆಯುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿರುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಟ್ಟಡ್ಕ ವಿಶ್ವ ಮತ್ತು ಗ್ರಾಪಂ ಸದಸ್ಯೆ ಜಾಜಿ ತಮಯ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net