ಪರಿಹಾರ ಚೆಕ್ ನೀಡಲು 1ಲಕ್ಷ ರೂ. ಲಂಚದ ಬೇಡಿಕೆ; ಇಇ ಅಶೋಕ‌ ಬಂಧನ

IMG-20251027-WA0276.jpg
Published on

ಬೆಳಗಾವಿ: ಕುಡಿಯುವ ನೀರು ಸರಬರಾಜು ಯೋಜನೆಗೆ ಸ್ವಾದಿನ ಪಡಿಸಿ ಕೊಂಡ ಜಮೀನು ಗೆ ಪರಿಹಾರ ದ ಚೆಕ್ ನೀಡಲು 1ಲಕ್ಷ್ಮ ಲಂಚ ಕೇಳಿದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರನನ್ನುಲೋಕಾಯುಕ್ತ ಪೋಲಿಸರು ಬಂಧಿಸಿದ್ದಾರೆ.

ಬೆಳಗಾವಿ ವಿಭಾಗದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಇ ಅಶೋಕ್ ಶಿರೂರ ಬಂಧಿತ ಅಧಿಕಾರಿ.

ರಾಯಬಾಗ ತಾಲೂಕಾ ಖೇಮಲಾಪುರ ಗ್ರಾಮದ ಯಾಸಿನ್ ಪೇಂಢಾರಿ ಅವರ 14 ಗುಂಟೆ ಜಮೀನನು ಮುಗಳಖೋಡ ಮತ್ತು ಹಾರೂಗೇರಿ ಪಟ್ಟಣ ಗಳಿಗೆ ಅಮೃತ ಯೋಜನೆ ಅಡಿ ಕುಡಿಯುವ ನೀರು ಸರಬರಾಜು ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ‌ಈ ಸ್ವಾಧೀನ ಭೂಮಿಗೆ ಸರ್ಕಾರದಿದ 18ಲಕ್ಷ ರೂ. ಮಂಜೂರಾಗಿತ್ತು. ಈ ಚೆಕ್ ಕೊಡಲು1ಲಕ್ಷ ಲಂಚ ಕ್ಕೆ ಬೇಡಿಕೆ ಇಟ್ಟಿದ್ದನು.

ಈ ಕುರಿತು ಕರ್ನಾಟಕ ಲೋಕಾಯುಕ್ತ ಬೆಳಗಾವಿ ಠಾಣೆಯಲ್ಲಿ ಅ.17ರಂದು ಪೊಎಸ್ ಐ ನಿರಂಜನ ಪಾಟೀಲ್ ರವರು ದೂರು ದಾಖಲಿಸಿ ಕೊಂಡು ತನಿಖೆ ಕೈಕೊಂಡಿದ್ದರು . ಸೋಮವಾರ ಅಧಿಕಾರಿಯನ್ನು ‌ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.

ಲೋಕಾಯುಕ್ತ ಎಸ್ ಪಿ ಹಣಮಂತರಾಯ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಿದ್ದಾರೆ. ತನಿಖಾ ತಂಡದಲ್ಲಿ ಪಿಐ ಗೋವಿಂದಗೌಡ ಪಾಟೀಲ್, ರವಿ ಮಾವರ್ಕರ್, ಗಿರೀಶ್, ಶಶಿಧರ್, ಸುರೇಶ ಮತ್ತು ಮಲ್ಲಿಕಾರ್ಜುನ ಥೈಕಾರ್ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net