ಎಲ್​ಎಲ್​ಆರ್, ಡಿಎಲ್ ಕಾಯುವ ಅವಧಿ ವಿಸ್ತರಣೆ: 30ರಿಂದ 90 ದಿನಕ್ಕೆ ಹೆಚ್ಚಳ

Car Driving woman 15 JAN 20
Published on

ಬೆಂಗಳೂರು: ಕಲಿಕಾ ಮತ್ತು ಚಾಲನಾ ಅನುಜ್ಞಾಪತ್ರ ಪಡೆಯಲು ಆನ್​ಲೈನ್ ಮೂಲಕ ಕಾಯ್ದಿರಿಸಿ, ಕಾಯುವ ಅವಧಿಯನ್ನು 30 ದಿನದಿಂದ 90 ದಿನಕ್ಕೆ ಹೆಚ್ಚಿಸಿ ಸಾರಿಗೆ ಇಲಾಖೆ ಆದೇಶಿಸಿದೆ.

ಕರೊನಾ ಕಾರಣದಿಂದಾಗಿ ಹಿಂದಿನಷ್ಟು ಕಲಿಕಾ ಮತ್ತು ಚಾಲನಾ ಅನುಜ್ಞಾಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಅಭ್ಯರ್ಥಿಗಳು ಒಮ್ಮೆಲೆ ಬರುವುದನ್ನು ತಡೆಯಲು ಕಾಯುವ ಅವಧಿಯನ್ನು 2 ತಿಂಗಳು ವಿಸ್ತರಿಸಲಾಗಿದೆ. ಕಚೇರಿ ಮುಖ್ಯಸ್ಥರು ಈ ಅವಧಿ ಮೀರದಂತೆ ಸೇವೆ ನೀಡಬೇಕು ಎಂದು ಇಲಾಖೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net