

ಮಡಿಕೇರಿ: ಕಾಂತೂರು ಮುರ್ನಾಡು ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಒಳಪಟ್ಟ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಎಲ್‌ಕೆಜಿ ಆರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಗಾಂಧಿನಗರ ಅಂಗನವಾಡಿಗೆ ಕಾಂತೂರು ಮೂರ್ನಾಡ್ ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳಿಗೆ ಸ್ವೆಟರ್, ಟ್ರ್ಯಾಕ್ ಶೂಟ್, ಯುನಿಫಾರ್ಮ್, ಡಿಸ್ಪ್ಲೇ ಬೋರ್ಡ್, ಮಂಜು ಕತ್ತರ್-೧೫ ಶೂ ಮತ್ತು ಶಾಕ್ಸ್ ನೀಡಲಾಗಿದೆ. ಅಪ್ಪ ನೆರವಂಡ ಸಚಿನ್ ಮಾದಪ್ಪ ಅವರು ೧೫ಬ್ಯಾಗ್, ದಿವಂಗತ ವಿ.ವಿ ಹರೀಶ್ ನಿರ್ಮಲ ಅವರ ಜ್ಞಾಪಕರ್ತ ಅವರ ಪುತ್ರ ಗಗನ್ರ್‌ವರು ಮಕ್ಕಳಿಗೆ ರೌಂಡ್ ಟೇಬಲ್ ೨ ಮತ್ತು ೧೦ ಮಕ್ಕಳ ಚೇರ್ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಕಾಂತೂರು ಮೂರ್ನಾಡ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚಂದ್ರ ಮೌಳಿ ಮಾತನಾಡಿ, ಅಂಗನವಾಡಿಯಲ್ಲಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಪ್ರತಿಯೊಬ್ಬ ಮಕ್ಕಳಿಗೂ ವೈಯಕ್ತಿಕವಾಗಿ ಗಮನಹರಿಸಿ ಶಿಸ್ತು, ಶಿಕ್ಷಣವನ್ನು ನೀಡುತ್ತಿದೆ. ಪಾಲಕರು ಮಕ್ಕಳನ್ನು ಅಂಗನವಾಡಿಗಳಿಗೆ ಸರ್ಕಾರಿ ಶಾಲೆಗಳಿಗೆ ಸೇರಿಸುವುದರೊಂದಿಗೆ ಇತರ ಪೋಷಕರಿಗೆ ತಿಳುವಳಿಕೆ ನೀಡಲು ಕರೆ ನೀಡಿದರು.
ಕಾಂತೂರು ಮೂರ್ನಾಡ್ ಗ್ರಾಮ ಪಂಚಾಯತಿ ಅಧ್ಯಕ್ಷ ಕುಶನ್ ರೈ ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಅಂಗನವಾಡಿ ಕೇಂದ್ರಕ್ಕೆ ಮೂಲಭೂತ ಸೌಕರ್ಯ ಒದಗಿಸುವುದರೊಂದಿಗೆ ಗಾಂಧಿನಗರ ಅಂಗನವಾಡಿ ಕೇಂದ್ರಕ್ಕೆ ಸ್ಥಳ ವಿಸ್ತರಣೆ ಮತ್ತು ಹೊಸ ಕೊಠಡಿಯನ್ನು ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಪಿ.ಯು.ಚೈತ್ರ, ಗ್ರಾಮ ಪಂಚಾಯತಿ ಅಧ್ಯಕ್ಷ ಕುಶನ್ ರೈ, ಪಿಡಿಓ ಚಂದ್ರಮೌಳಿ, ಸದಸ್ಯರಾದ ಮುಂಡಂಡ ವಿಜಯಲಕ್ಷ್ಮಿ, ಮೇಪಾಡಂಡ ಸವಿತಾ ಕೀರ್ತನ್ ಅವರನ್ನು ಬಾಲವಿಕಾಸ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಅನಿತಾ ಅವರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.
ಕಾಂತೂರು ಮೂರ್ನಾಡ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೇಖಾ, ಸದಸ್ಯರಾದ ವಿಜಯಲಕ್ಷ್ಮಿ, ಮೀನಾಕ್ಷಿ, ಪುಷ್ಪ, ಈರಾ ಸುಬ್ಬಯ್ಯ ಹಾಗೂ ಅಂಗನವಾಡಿ ಕಾರ್ಯಕರ್ತೆ ಪಿ.ಯು.ಚೈತ್ರ, ಬಾಡಗ ಅಂಗನವಾಡಿ ಕಾರ್ಯಕರ್ತೆ ಬಿ.ಬಿ.ಜಯಂತಿ, ಶಾಸ್ತ್ರಿನಗರ ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ, ಹಾಗೂ ಅಂಗನವಾಡಿ ಕಾರ್ಯಕರ್ತೆರಾದ ಗೀತಾ, ಕುಸುಮರವರು ಹಾಜರಿದ್ದರು.