ಬದನಾಜೆಯಲ್ಲಿ ಎಲ್‌ಕೆಜಿ ತರಗತಿ ಆರಂಭ

New Project (55)
Published on

ಬೆಳ್ತಂಗಡಿ: ಬದನಾಜೆ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ತರಗತಿ ಉದ್ಘಾಟನೆ ನೆರವೇರಿತು.

ಉದ್ಯಮಿ ಮೋಹನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಶಾಲೆ ಸಭಾಂಗಣಕ್ಕೆ ಇಂಟರ್‌ಲಾಕ್ ಮತ್ತು ಶಾಲಾ ಮಕ್ಕಳಿಗೆ ಬ್ಯಾಗ್, ಕೊಡೆ ನೀಡುವುದಾಗಿ ಭರವಸೆ ನೀಡಿದರು.

ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಅಧ್ಯಕ್ಷತೆ ವಹಿಸಿದ್ದರು. ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂ ಅಧ್ಯಕ್ಷ ರಾಮಯ್ಯ ಗೌಡ, ಗ್ರಾಪಂ ಸದಸ್ಯ ಇಲ್ಯಾಸ್, ಗುರುಪ್ರಸಾದ್, ನಾಗವೇಣಿ, ಯುವಕ ಮಂಡಲ ಅಧ್ಯಕ್ಷ ಪೀತಾಂಬರ, ಯುವತಿ ಮಂಡಲ ಅಧ್ಯಕ್ಷೆ ನವೀನ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಮುನಾ, ಎಸ್‌ಡಿಎಂಸಿ ಅಧ್ಯಕ್ಷ ಅನಿಲ್ ಡಿಸೋಜ, ಉಪಾಧ್ಯಕ್ಷೆ ಬಬಿತಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಲಲಿತಾ ಕುಮಾರಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನಿರಂಜನ್ ಪ್ರಸ್ತಾವಿಸಿದರು. ಸಹಶಿಕ್ಷಕಿ ಜಯಲಕ್ಷ್ಮೀ ನಿರೂಪಿಸಿದರು. ಎಲ್‌ಕೆಜಿ ತರಗತಿ ಶಿಕ್ಷಕಿ ಅರುಣಾಕ್ಷಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net