

ಕೊಟ್ಟೂರು: ಎಲ್ಲ ಸಮುದಾಯಗಳು ಸೌಹಾರ್ದ, ಸಹಬಾಳ್ವೆಯಿಂದ ಇರುವುದೇ ನಿಜವಾದ ಧರ್ಮ. ಇದು ಚಿರಬಿ ಗ್ರಾಮದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಹರಿಹರ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಹೇಳಿದರು.
ಚಿರಬಿ ಗ್ರಾಮದಲ್ಲಿ ಬುಧವಾರ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿ ಆನಾವರಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪೀಠದ ದಾಸೋಹಕ್ಕೆ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಅಕ್ಕಿ ನೀಡುತ್ತಿರುವುದಾಗಿ ವಾಗ್ದಾನ ಮಾಡಿರುವುದು ಸಂತಸ ತಂದಿದೆ.
ಕಿತ್ತೂರು ರಾಣಿ ಚನ್ನಮ್ಮ ಗತಿಸಿ 200 ವರ್ಷಗಳಾದ ಈ ಸಂದರ್ಭದಲ್ಲಿ ಚಿರಬಿ ಗ್ರಾಮಸ್ಥರು ಚನ್ನಮ್ಮನ ಪುತ್ಥಳಿ ಸ್ಥಾಪಿಸುತ್ತಿರುವುದು ಅತ್ಯಂತ ಶ್ಲಾಘನೀಯ ಸಂಗತಿಯಾಗಿದೆ. ಶ್ರಾವಣ ಮಾಸದಲ್ಲಿ ಲಿಂಗ ದೀಕ್ಷೆ ಆಯೋಜಿಸುವಂತೆ ಗ್ರಾಮಸ್ಥರಿಗೆ ತಿಳಿಸಿದರು.
ಪಂಚಮಸಾಲಿ ಸಮಾಜದ ಸ್ಥಳೀಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ, ಜಿಪಂ ಮಾಜಿ ಉಪಾಧ್ಯಕ್ಷ ಹಾಗೂ ವಿಜಯನಗರ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಚನ್ನಬಸವನಗೌಡ, ಉದ್ಯಮಿ ಗುಳಿಗಿ ವೀರೇಂದ್ರ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಚಾಪಿ ಚಂದ್ರಪ್ಪ, ರೇವಣ್ಣ ಹೊಂಬಾಳೆ, ಕೆ.ಎಸ್. ವೀಣಾ ವೀವೇಕಾನಂದಗೌಡ, ಹರ ಬ್ಯಾಂಕ್ ಅಧ್ಯಕ್ಷ ವೀವೇಕಾನಂದ, ಡಾ. ವಿಶ್ವನಾಥ ಇತರರಿದ್ದರು.