3 ವರ್ಷದಿಂದ ಗುಡಿಸಲಲ್ಲೇ ವಾಸ!

bangarpete
Published on

ಬೂದಿಕೋಟೆ: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ಸರ್ಕಾರ ಮನೆ ನಿರ್ಮಿಸಿಕೊಳ್ಳಲು ಅನುದಾನ ಬಿಡುಗಡೆ ಮಾಡದ ಕಾರಣ ಕಳೆದ ಮೂರು ವರ್ಷಗಳಿಂದ ಗುಡಿಸಲಿನಲ್ಲೇ ವಾಸ ಮಾಡಬೇಕಾದ ದುಸ್ಥಿತಿ ನಿಮಾರ್ಣವಾಗಿದೆ.

ಬಂಗಾರಪೇಟೆ ತಾಲೂಕು ಬಲಮಂದೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಭಾರತಮ್ಮ ಮತ್ತು ವೆಂಕಟೇಶಪ್ಪ ದಂಪತಿ ಕುಟುಂಬ ಸಮೇತ ವಾಸವಾಗಿದ್ದರು. 2022ರಲ್ಲಿ ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ವಾಸವಿದ್ದ ಮನೆ ಕುಸಿದು ಸಂಪೂರ್ಣ ಹಾನಿಯಾಗಿತ್ತು. ವಾಸಿಸಲು ಮನೆ ಇಲ್ಲದೇ ಪರದಾಡುತ್ತಿದ್ದ ಕುಟುಂಬಕ್ಕೆ ಗ್ರಾಮಸ್ಥರು ಹಾಗೂ ಪಂಚಾಯಿತಿ ಆಶ್ರಯ ಕಲ್ಪಿಸಿದ್ದರು. ಪ್ರಕೃತಿ ವಿಕೋಪದಿಂದ ಮನೆ ನಾಶವಾದ ಕಾರಣ ಕಂದಾಯ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ನಡೆಸಿ ನೂತನ ಮನೆ ಕಟ್ಟಲು ಹಣ ನೀಡುವ ಭರವಸೆ ನೀಡಿದ್ದರು. ಅದರಂತೆ ಎಲ್ಲ ದಾಖಲೆಗಳನ್ನು ಪಡೆದು ಜಿಲ್ಲಾಧಿಕಾರಿಗಳಿಗೆ ಸಿಾರಸು ಮಾಡಲಾಗಿತ್ತು. ಅನುದಾನ ಹಾಗೂ ಮನೆ ನಿಮಾರ್ಣಕ್ಕೆ ಬೇಕಾದ ಜಿಪಿಎಸ್​ ಇತ್ಯಾದಿಗಳನ್ನು ಮಾಡಿ ವರದಿ ಸಲ್ಲಿಕೆಯಾಗಿತ್ತು. ಅದರಂತೆ ನೂತನ ಮನೆ ನಿಮಾರ್ಣಕ್ಕೆ ಜಿಲ್ಲಾಧಿಕಾರಿಗಳು ಒಟ್ಟು 3.5 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದು, ಮೊದಲ ಹಂತವಾಗಿ ಸುಮಾರು 80 ಸಾವಿರ ರೂ.ಗಳನ್ನು ಫಲಾನುಭವಿ ಖಾತೆಗೆ ಜಮೆ ಆಗಿದೆ. ಸರ್ಕಾರದಿಂದ ಬಂದ ಹಣದ ಜತೆಗೆ ಸಾಲ ಸೋಲ ಮಾಡಿ ಮನೆ ನಿರ್ಮಿಸಿಕೊಳ್ಳಲು ಮುಂದಾದ ಭಾರತಮ್ಮ ಪಾಯ ಹಾಕಿ ಲಿಂಟಲ್​ ಮಟ್ಟದವರೆಗೂ ನಿಮಾರ್ಣದ ಕಾರ್ಯ ಮಾಡಿದ್ದಾರೆ. ಮುಂದೆ ಸರ್ಕಾರದಿಂದ ಬರುವ ಹಣದಿಂದ ಮನೆಯನ್ನು ಪೂರ್ಣಗೊಳಿಸಿಕೊಳ್ಳೊಣ ಎಂದು ಕಳೆದ ಮೂರು ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಮುಂದೆ ಬರಬೇಕಿದ್ದ ಅನುದಾನ ಬಾರದೆ ಗುಡಿಸಿಲಿನಲ್ಲಿ ಕಾಲ ಕಳೆಯುವಂತಾಗಿದೆ.

ತಾಲೂಕು ಕಚೇರಿಯಲ್ಲಿ ಕೇಸ್​ ವರ್ಕರ್​ ಪ್ರಕೃತಿ ವಿಕೋಪದಿಂದ ಬರಬೇಕಿರುವ ಅನುದಾನ ಸೇರಿ ಎಲ್ಲ ಸೌಲಭ್ಯಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕಾಲ ಕಾಲಕ್ಕೆ ವರದಿ ಸಲ್ಲಿಸಿ ಫಲಾನುಭವಿಗಳಿಗೆ ಯೋಜನೆಯ ಅನುಕೂಲ ತಲುಪಿಸಬೇಕು. ಆದರೆ ಕಚೇರಿಯಲ್ಲಿ ಆಗುತ್ತಿರುವ ಸಿಬ್ಬಂದಿ ಬದಲಾವಣೆ ಸೇರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನೆ ನಿಮಾರ್ಣಕ್ಕೆ ಹಣ ಬಿಡುಗಡೆ ಮಾಡಲು ಸರಿಯಾದ ವರದಿ ಹಾಗೂ ದಾಖಲೆಗಳು ಸಲ್ಲಿಕೆಯಾಗಲಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಭಾರತಮ್ಮ ಅವರ ಮನೆಗೆ ಅನುದಾನ ಬಿಡುಗಡೆಯಾಗದೆ ನಿಮಾರ್ಣ ಕಾರ್ಯ ಅರ್ಧಕ್ಕೆ ನಿಂತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಪ್ರಕೃತಿ ವಿಕೋಪದಿಂದ ಸೂರು ಕಳೆದುಕೊಂಡ ಕುಟುಂಬಕ್ಕೆ ಮನೆ ನಿರ್ಮಿಸಲು ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

"ಮೂರು ವರ್ಷಗಳ ಹಿಂದೆ ಬಿದ್ದ ಜೋರು ಮಳೆಗೆ ಮನೆಯ ಗೋಡೆಗಳು ಕುಸಿದು ಮನೆ ಬಿದ್ದಿತ್ತು. ಸರ್ಕಾರದಿಂದ ಮನೆ ನಿರ್ಮಿಸಿಕೊಳ್ಳಲು ಅನುದಾನ ನೀಡುವುದಾಗಿ ಅಧಿಕಾರಿಗಳು ಎಲ್ಲ ದಾಖಲೆಗಳನ್ನು ಪಡೆದುಕೊಂಡು ಮೊದಲ ಹಂತದ ಹಣ ನೀಡಿದ್ದಾರೆ. ಉಳಿದ ಬಾಕಿ ಹಣ ನೀಡದ ಕಾರಣ ಗುಡಿಸಲಿನಲ್ಲಿ ಜೀವನ ಸಾಗಿಸಬೇಕಾದ ಸ್ಥಿತಿ ಬಂದಿದೆ. ಅಧಿಕಾರಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸಿ ಮನೆ ನಿಮಾರ್ಣಕ್ಕೆ ಶೀಘ್ರ ಹಣ ನೀಡಬೇಕು."

- ಭಾರತಮ್ಮ

ಬಲಮಂದೆ

"ಮಳೆಯಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ಮನೆ ನಿಮಾರ್ಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿ ಅನುದಾನ ವಿತರಣೆ ಮಾಡದ ಕಾರಣ ಗಾಳಿ ಮಳೆಯಲ್ಲಿ ಗುಡಿಸಲಿನಲ್ಲಿ ಜೀವನ ಸಾಗಿಸುವಂತಾಗಿದೆ. ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸರಿಯಾದ ಮಾಹಿತಿಯನ್ನು ನೀಡದ ಕಾರಣ ಮನೆ ನಿಮಾರ್ಣ ಕಾರ್ಯ ಸ್ಥಗಿತಗೊಂಡಿದೆ. ಜಿಲ್ಲಾಧಿಕಾರಿಗಳು ಬಡ ಕುಟುಂಬಕ್ಕೆ ಶೀಘ್ರವಾಗಿ ಹಣ ಮಂಜೂರು ಮಾಡಲು ಮುಂದಾಗಬೇಕು."

- ನಾರಾಯಣಸ್ವಾಮಿ, ಮುಖಂಡ

"ಮನೆ ಕಳೆದುಕೊಂಡಿರುವ ಮತ್ತು ಅನುದಾನ ಬಿಡುಗಡೆಗೆ ಸಂಬಂಧಿಸಿದ ಮಾಹಿತಿ ಇಲ್ಲ. ಕೂಡಲೇ ಪರಿಶೀಲನೆ ನಡೆಸಿ ಪಲಾನುಭವಿಯ ಮನೆ ನಿಮಾರ್ಣಕ್ಕೆ ಅನುದಾನ ಮಂಜೂರಾತಿಗೆ ಅಗತ್ಯ ಕ್ರಮ ಜರುಗಿಸಲಾಗುತ್ತದೆ."

- ಸುಜಾತಾ, ತಹಸೀಲ್ದಾರ್​ ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net