ಜಾನುವಾರು ಕದಿಯುತ್ತಿದ್ದ ಆರು ಕಳ್ಳರ ಬಂಧನ

1Athani2-Web
ಜಾನುವಾರು ಕಳ್ಳತನ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಪಿಎಸ್‌ಐ ಕುಮಾರ ಹಾಡಕಾರ ಇತರರಿದ್ದರು.
Published on

ಅಥಣಿ: ತಾಲೂಕಿನಲ್ಲಿ ದನ-ಕರು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ 6 ಜನರ ತಂಡವನ್ನು ಅಥಣಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ತಾಲೂಕಿನ ಸತ್ತಿ ಗ್ರಾಮದ ಹೊರವಲಯದ ತೋಟದ ವಸತಿಯಲ್ಲಿರುವ ರೈತ ರಾಯಣ್ಣ ಸಿಂಧೂರ ಎಂಬುವರಿಗೆ ಸೇರಿದ 2 ಎಮ್ಮೆಗಳು ರಾತ್ರಿ ವೇಳೆ ಕಳ್ಳತನವಾಗಿರುವ ಕುರಿತು ಅಥಣಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ಡಿವೈಎಸ್ಪಿ ಎಸ್.ವಿ. ಗಿರೀಶ ಮಾರ್ಗದರ್ಶನದಲ್ಲಿ ಪೊಲೀಸರು ಕಳ್ಳರನ್ನು ಬಂಧಿಸಿದ್ದಾರೆ. ಆರೋಪಿಗಳು ರಾಯಬಾಗ ತಾಲೂಕಿನವರು ಎಂದು ತಿಳಿದು ಬಂದಿದೆ. ಅಥಣಿ, ಕಾಗವಾಡ, ರಾಯಬಾಗ ಸುತ್ತಮುತ್ತಲಿನ ನಿರ್ಜನ ಪ್ರದೇಶದಲ್ಲಿ ವಾಸವಿರುವ ರೈತರ ದನಕರು, ಮೇಕೆ ಕಳ್ಳತನ ಮಾಡಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಿಎಸ್‌ಐ ಕುಮಾರ ಹಾಡಕಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net